Select Your Language

Notifications

webdunia
webdunia
webdunia
webdunia

ತೊಟ್ಟ ಟಿ ಶರ್ಟ್ ನಿಂದಲೇ ಅಭಿಮಾನಿಯ ಬೈಕ್ ಒರೆಸಿ ಆಟೋಗ್ರಾಫ್ ನೀಡಿದ ಧೋನಿ

ತೊಟ್ಟ ಟಿ ಶರ್ಟ್ ನಿಂದಲೇ ಅಭಿಮಾನಿಯ ಬೈಕ್ ಒರೆಸಿ ಆಟೋಗ್ರಾಫ್ ನೀಡಿದ ಧೋನಿ
ರಾಂಚಿ , ಸೋಮವಾರ, 27 ನವೆಂಬರ್ 2023 (11:00 IST)
Photo Courtesy: Twitter
ರಾಂಚಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಧೋನಿಗೆ ಈಗಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರನ್ನು ಆರಾಧಿಸುವ ಅಭಿಮಾನಿಗಳು ಅವರನ್ನು ಒಮ್ಮೆ ಭೇಟಿಯಾಗಬೇಕೆಂದು ಕಾಯುತ್ತಿರುತ್ತಾರೆ.

ಸಾಮಾನ್ಯವಾಗಿ ಧೋನಿ ಎಲ್ಲರಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ. ಹಾಗಿದ್ದರೂ ಜನರಿಗೆ ಅವರ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ತಲಾ ಧೋನಿಯ ತಾಕತ್ತೇ ಅಂತಹದ್ದು.

ಧೋನಿ ಬೈಕ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಅವರ ಮನೆಯಲ್ಲಿ ಒಂದು ಬೈಕ್ ಶೋ ರೂಂಗಿಂತಲೂ ಅಧಿಕ ಬೈಕ್ ಸಂಗ್ರಹವಿದೆ. ಹೊಸ ಮಾದರಿಯ ಬೈಕ್ ಕಂಡಾಗಲೆಲ್ಲಾ ಧೋನಿ ಉತ್ಸಾಹದಿಂದ ಅದರ ಬಗ್ಗೆ  ವಿಚಾರಿಸಿಕೊಳ್ಳುತ್ತಾರೆ.

ಇದೀಗ ಅಭಿಮಾನಿಯೊಬ್ಬರು ತಮ್ಮ ಹೊಸ ಮಾಡೆಲ್ ಬೈಕ್ ನ್ನು ಧೋನಿ ಬಳಿ ಸಹಿ ಹಾಕಿಸಿಕೊಳ್ಳಲು ತಂದಿದ್ದಾರೆ. ಇದನ್ನು ನೋಡಿದ ಧೋನಿ ಹಸ್ತಾಕ್ಷರ ನೀಡುವ ಮುನ್ನ ಬೈಕ್ ನ ಮುಂಭಾಗವನ್ನು ತಾವು ತೊಟ್ಟಿದ್ದ ಟಿ-ಶರ್ಟ್ ನಿಂದಲೇ ಒರೆಸಿ ಹಸ್ತಾಕ್ಷರ ನೀಡಿದ್ದಾರೆ. ಬಳಿಕ ಆ ಬೈಕ್ ಓಡಿಸಿ ಖುಷಿಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ವಿ ಜೈಸ್ವಾಲ್ ಕೆನ್ನೆ ಹಿಂಡಿ ಮುತ್ತು ಕೊಟ್ಟ ಅಭಿಮಾನಿ: ನಾಚಿಕೊಂಡ ಕ್ರಿಕೆಟಿಗ