Select Your Language

Notifications

webdunia
webdunia
webdunia
Saturday, 29 March 2025
webdunia

ಧೋನಿಯ ಒಂದು ಸಲಹೆ ರಿಂಕು ಸಿಂಗ್ ಇಮೇಜ್ ಬದಲಾಯಿಸಿತ್ತು!

ಧೋನಿಯ ಒಂದು ಸಲಹೆ ರಿಂಕು ಸಿಂಗ್ ಇಮೇಜ್ ಬದಲಾಯಿಸಿತ್ತು!
ಮುಂಬೈ , ಶನಿವಾರ, 25 ನವೆಂಬರ್ 2023 (08:20 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಒತ್ತಡದಲ್ಲಿದ್ದಾಗ ಕೂಲ್ ಆಗಿ ಆಡಿ ಯಶಸ್ವಿಯಾಗಿ ಪಂದ್ಯ ಮುಗಿಸಿದ ಯುವ ಬ್ಯಾಟಿಗ ರಿಂಕು ಸಿಂಗ್ ಬಗ್ಗೆ ಈಗ ಎಲ್ಲೆಡೆ ಹೊಗಳಿಕೆ ಕೇಳಿಬರುತ್ತಿದೆ.

ರಿಂಕು ಸಿಂಗ್ ಈ ರೀತಿ ಫಿನಿಶರ್ ಪಾತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ರಿಂಕು ಸಿಂಗ್, ಎರಡು ಬಾರಿ ಅಸಾಧ್ಯವೆನಿಸುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಾವು ಒಬ್ಬ ಉತ್ತಮ ಫಿನಿಶರ್ ಎಂದು ಸಾಬೀತಪಡಿಸಿದ್ದರು.

ಇದೀಗ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದ ಬಳಿಕ ಅವರನ್ನು ಧೋನಿಯಂತೆ ಕೂಲ್ ಆಗಿ ಫಿನಿಶ್ ಮಾಡಿದ್ದಾಗಿ ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ರಿಂಕು ತಮಗೆ ಧೋನಿ ನೀಡಿದ ಸಲಹೆ ಈ ರೀತಿ ಪಂದ್ಯ ಮುಗಿಸಲು ಹೇಗೆ ಸಹಾಯ ಮಾಡಿತು ಎಂದು ಬಯಲು ಮಾಡಿದ್ದಾರೆ.

‘ನಾನು ಒಮ್ಮೆ ಮಹಿ ಭಾಯಿ (ಧೋನಿ) ಬಳಿ ಕೊನೆಯ ಓವರ್ ನಲ್ಲಿ ಕೂಲ್ ಆಗಿ ಪಂದ್ಯ ಮುಗಿಸುವಾಗ ನಿಮ್ಮ ಯೋಚನೆ ಹೇಗಿರುತ್ತದೆ ಎಂದು ಕೇಳಿದ್ದೆ. ಅದಕ್ಕೆ ಅವರು ಮನಸ್ಸು ಶಾಂತವಾಗಿರಬೇಕು ಮತ್ತು ಎಷ್ಟು ಸಾಧ‍್ಯವೋ ಅಷ್ಟು ನೇರ ಹೊಡೆತ ಹೊಡೆಯಬೇಕು ಎಂದಿದ್ದರು. ಅವರ ಸಲಹೆಯಂತೆ ನಾನು ಕೂಲ್ ಆಗಿರಲು ಪ್ರಯತ್ನಿಸುತ್ತೇನೆ. ಯಾವುದೇ ಭಾವನೆ ವ್ಯಕ್ತಪಡಿಸುವುದಿಲ್ಲ. ಇದು ನನಗೆ ಸಹಾಯ ಮಾಡಿತು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾ ಮಾಧ್ಯೆಮದಿಂದ ಅವಮಾನ