Publish Date: Thu, 23 Nov 2023 (09:38 IST)
Updated Date: Thu, 23 Nov 2023 (09:44 IST)
ವಿಶಾಖಪಟ್ಟಣಂ: ಇತ್ತೀಚೆಗಷ್ಟೇ ವಿಶ್ವಕಪ್ ಫೈನಲ್ ಸೋಲಿನ ಹತಾಶೆ ಒಂದೆಡೆಯಾದರೆ ಇದೀಗ ಅದೇ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಯುವ ಪಡೆ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟಿ20 ಸರಣಿ ಆಡಲು ಸಜ್ಜಾಗಿದೆ.
ಇಂದಿನಿಂದ ಐದು ಪಂದ್ಯಗಳ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಇಂದು ವಿಶಾಖಪಟ್ಟಣಂನಲ್ಲಿ ನಡೆಯುವುದು. ಇದಕ್ಕಾಗಿ ನಿನ್ನೆಯೇ ಟೀಂ ಇಂಡಿಯಾ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಅಭ್ಯಾಸವನ್ನೂ ನಡೆಸಿದೆ.
ಆದರೆ ಈ ನಡುವೆ ಸಂಪ್ರದಾಯದಂತೆ ಪತ್ರಿಕಾಗೋಷ್ಠಿಗೆ ಬಂದಿದ್ದ ನಾಯಕ ಸೂರ್ಯಕುಮಾರ್ ಯಾದವ್ ನಿಜಕ್ಕೂ ದಂಗಾಗಿದ್ದಾರೆ. ಅವರ ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು ಮಾತ್ರ ಆಗಮಿಸಿದ್ದರು. ಪತ್ರಕರ್ತರ ಸಂಖ್ಯೆ ನೋಡಿ ಸೂರ್ಯಗೇ ದಂಗಾಗಿದೆ. ಜೊತೆಗೆ ಒಂದು ರೀತಿಯ ಅವಮಾನವಾಗಿದೆ.
ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಫೈನಲ್ ಸೋಲಿನ ನೋವು ಇನ್ನೂ ಮಾಸಿಲ್ಲ. ಅದು ಕ್ರೀಡಾ ಪತ್ರಕರ್ತರಲ್ಲೂ ಇದೆ. ಹೀಗಿರುವಾಗ ಮತ್ತೊಮ್ಮೆ ಅದೇ ಆಸ್ಟ್ರೇಲಿಯಾ ವಿರುದ್ಧ ಸರಣಿ ಬಗ್ಗೆ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಹೀಗಾಗಿ ಪತ್ರಕರ್ತರೂ ಈ ಪತ್ರಿಕಾಗೋಷ್ಠಿಗೆ ಬರಲು ಆಸಕ್ತಿ ತೋರಿಸಿಲ್ಲ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡಿರುವ ಸೂರ್ಯಕುಮಾರ್ ಗೆ ಇದು ಒಂದು ರೀತಿಯ ಅವಮಾನವಾಗಿದೆ.