Publish Date: Sat, 13 May 2023 (09:10 IST)
Updated Date: Sat, 13 May 2023 (09:39 IST)
ಮುಂಬೈ: ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೊಳಗಾಗಿದ್ದ ಸೂರ್ಯ ಕುಮಾರ್ ಯಾದವ್ ರನ್ ಬರಗಾಲಕ್ಕೆ ಕೊನೆಗೂ ಬ್ರೇಕ್ ಹಾಕಿದ್ದಾರೆ.
ಗುಜರಾತ್ ವಿರುದ್ಧ ನಡೆದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಸೂರ್ಯ 49 ಎಸೆತಗಳಿಂದ 11 ಫೋರ್, 6 ಸಿಕ್ಸರ್ ಸಹಿತ ಅಜೇಯ 103 ರನ್ ಚಚ್ಚಿದರು. ಕಳೆದ ಪಂದ್ಯದಲ್ಲೂ ಸೂರ್ಯ ಮುಂಬೈ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಸತತ ರನ್ ಬರಗಾಲ ಎದುರಿಸಿದ್ದ ಸೂರ್ಯ ನಿರ್ಣಾಯಕ ಹಂತದಲ್ಲಿ ಫಾರ್ಮ್ ಗೆ ಬಂದಿರುವುದು ಮುಂಬೈಗೆ ಪ್ಲಸ್ ಪಾಯಿಂಟ್. ಸೂರ್ಯ ನಿನ್ನೆಯ ಇನಿಂಗ್ಸ್ ಗೆ ರೋಹಿತ್ ಶರ್ಮಾ, ಸಚನ್ ತೆಂಡುಲ್ಕರ್ ಕೂಡಾ ತಲೆಬಾಗಿದ್ದಾರೆ.