Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಯಶಸ್ವಿ ಜೈಸ್ವಾಲ್ ದಾಖಲೆ, ರಾಜಸ್ಥಾನ್ ಗೆ ಗೆಲುವು

ಐಪಿಎಲ್ 2023: ಯಶಸ್ವಿ ಜೈಸ್ವಾಲ್ ದಾಖಲೆ, ರಾಜಸ್ಥಾನ್ ಗೆ ಗೆಲುವು
ಕೋಲ್ಕೊತ್ತಾ , ಶುಕ್ರವಾರ, 12 ಮೇ 2023 (06:50 IST)
ಕೋಲ್ಕೊತ್ತಾ:ಐಪಿಎಲ್ 2023 ರಲ್ಲಿ ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಬ್ಯಾಟಿಂಗ್ ನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 57 ರನ್ ಗಳಿಸಿದರು. ಆದರೆ ಉಳಿದವರಿಂದ ತಕ್ಕ ಸಾಥ್ ಸಿಗಲಿಲ್ಲ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಆರಂಭದಿಂದಲೇ ಅಬ್ಬರಿಸಿದರು. ಮೊದಲ ಎಸೆತದಿಂದಲೇ ಚಚ್ಚಲು ಆರಂಭಿಸಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಐಪಿಎಲ್ ನಲ್ಲಿ  ವೇಗದ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. 47 ಎಸೆತಗಳಿಂದ ಒಟ್ಟು 5 ಸಿಕ್ಸರ್, 13 ಬೌಂಡರಿ ಸಹಿತ 98 ರನ್ ಗಳಿಸಿದ ಜೈಸ್ವಾಲ್ ಕೊನೆಯವರೆಗೂ ಅಜೇಯರಾಗುಳಿದರು. ಅವರಿಗೆ ತಕ್ಕ ಸಾಥ್ ನೀಡಿದ ನಾಯಕ ಸಂಜು ಸ್ಯಾಮ್ಸನ್ 29 ಎಸೆತಗಳಿಂದ 48 ರನ್ ಗಳಿಸಿದರು. ಅಂತಿಮವಾಗಿ ರಾಜಸ್ಥಾನ್ 13.1 ಓವರ್ ಗಳಲ್ಲಿ 151 ರನ್ ಗಳಿಸಿ ಗೆಲುವು ಕಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಧ್ವೇ ಷ ಸಾಧಿಸಲು ನನಗೆ ಸಮಯವಿಲ್ಲ: ನವೀನ್ ಗೆ ಟಾಂಗ್ ಕೊಟ್ಟ ಕೊಹ್ಲಿ