Publish Date: Sun, 26 Nov 2023 (20:02 IST)
Updated Date: Sun, 26 Nov 2023 (20:04 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಆಯಾ ಫ‍್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿ ಕೊಡಲು ಇಂದು ಅಂತಿಮ ದಿನವಾಗಿತ್ತು. ಅದರಂತೆ ಎಲ್ಲಾ ಫ‍್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಾರಿ ಬರೋಬ್ಬರಿ 11 ಆಟಗಾರರನ್ನು ರಿಲೀಸ್ ಮಾಡಿದೆ. ಆದರೆ ಸ್ಟಾರ್ ಆಟಗಾರರಾದ ಕೊಹ್ಲಿ, ಮ್ಯಾಕ್ಸ್ ವೆಲ್, ಫಾ ಡು ಪ್ಲೆಸಿಸ್, ಅನೂಜ್ ರಾವತ್, ರಜತ್ ಪಟಿದಾರ್, ದಿನೇಶ್ ಕಾರ್ತಿಕ್, ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಮೊಹಮ್ಮದ್ ಸಿರಾಜ್ ಮುಂತಾದವರನ್ನು ಉಳಿಸಿಕೊಂಡಿದೆ.
ಆದರೆ ರಿಲೀಸ್ ಮಾಡಲಾದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ವಣೀಂದು ಹಸರಂಗ, ಕಳೆದ ಬಾರಿ ದುಬಾರಿಯಾಗಿದ್ದ ವೇಗಿ ಹರ್ಷಲ್ ಪಟೇಲ್ ಸೇರಿಕೊಂಡಿದ್ದಾರೆ.
ಉಳಿದಂತೆ ಕೇದಾರ್ ಜಾದವ್, ಜೋಶ್ ಹೇಝಲ್ ವುಡ್, ಫಿನ್ ಅಲೆನ್, ಬ್ರೇಸ್ ವೆಲ್, ಡೇವಿಡ್ ವಿಲ್ಲೆ, ವೇಯ್ನ್ ಪರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಸೇರಿದ್ದಾರೆ.