Publish Date: Tue, 05 Dec 2023 (12:12 IST)
Updated Date: Wed, 06 Dec 2023 (08:37 IST)
ಮುಂಬೈ: ಕ್ರಿಕೆಟ್ ನಲ್ಲಿ ಒಬ್ಬ ಬೌಲರ್ ಗೂ, ಅಥ್ಲೆಟಿಕ್ಸ್ ಜ್ಯಾವೆಲಿನ್ ಥ್ರೋ ಆಟಗಾರನಿಗೂ ಒಂದು ರೀತಿಯ ಸಂಬಂಧವಿದೆ. ಇಬ್ಬರಿಗೂ ಕರಾರುವಾಕ್ ಗುರಿಯತ್ತ ಎಸೆಯುವುದೇ ಮುಖ್ಯ.
ಇದೀಗ ಭಾರತದ ಗೋಲ್ಡನ್ ಹುಡುಗ ಜ್ಯಾವೆಲಿನ್ ಥ್ರೋ ಸ್ಟಾರ್ ನೀರಜ್ ಚೋಪ್ರಾ ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ಪ್ರಮುಖ ವೇಗಿ. ಅವರ ಬೌಲಿಂಗ್ ನಲ್ಲಿ ಪೇಸ್ ಹೆಚ್ಚಿಸಲು ನೀರಜ್ ಚೋಪ್ರಾ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ. ಬುಮ್ರಾ ಬೌಲಿಂಗ್ ಶೈಲಿ ನನಗೆ ತುಂಬಾ ಇಷ್ಟ. ಆದರೆ ಅವರ ಬೌಲಿಂಗ್ ನಲ್ಲಿ ಪೇಸ್ ಹೆಚ್ಚಿಸಲು ಅವರು ಇನ್ನೂ ಸುದೀರ್ಘ ರನ್ ಅಪ್ ತೆಗೆದುಕೊಳ್ಳಬೇಕು ಎಂದಿದ್ದಾರೆ.
ನಾವು ಸಾಮಾನ್ಯವಾಗಿ ಜ್ಯಾವೆಲಿನ್ ಥ್ರೋವರ್ ಗಳಾದ ನಾವು ಬೌಲರ್ ಗಳು ಪೇಸ್ ಹೇಗೆ ಹೆಚ್ಚಿಸಬಹುದು ಎಂದು ಚರ್ಚಿಸುತ್ತೇವೆ. ಕೊಂಚ ಹಿಂದೆಯಿಂದ ಬೌಲರ್ ಗಳು ರನ್ ಅಪ್ ಶುರು ಮಾಡಿದರೆ ಉತ್ತಮ ಎಂದಿದ್ದಾರೆ.