Select Your Language

Notifications

webdunia
webdunia
webdunia
webdunia

India-Australia T20I: ಅಂಪಾಯರ್ ವಿವಾದಾತ್ಮಕ ತೀರ್ಪಿನ ವಿರುದ್ಧ ಮ್ಯಾಥ್ಯೂ ವೇಡ್ ಗರಂ

India-Australia T20I: ಅಂಪಾಯರ್ ವಿವಾದಾತ್ಮಕ ತೀರ್ಪಿನ ವಿರುದ್ಧ ಮ್ಯಾಥ್ಯೂ ವೇಡ್ ಗರಂ
ಬೆಂಗಳೂರು , ಸೋಮವಾರ, 4 ಡಿಸೆಂಬರ್ 2023 (09:39 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಆಸೀಸ್ ನಾಯಕ ಮ್ಯಾಥ್ಯೂ ವೇಡ್‍ ಅಂಪಾಯರ್ ಮೇಲೆ ಸಿಟ್ಟಾದ ಘಟನೆ ನಡೆಯಿತು.

ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 10 ರನ್ ಬೇಕಾಗಿತ್ತು. ಮ್ಯಾಥ್ಯೂ ವೇಡ್ ಕ್ರೀಸ್ ನಲ್ಲಿದ್ದರು. ಹೀಗಾಗಿ ಆಸೀಸ್ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಅರ್ಷ್ ದೀಪ್ ಸಿಂಗ್ ಎಸೆದ ಮೊದಲ ಬಾಲ್ ಬೌನ್ಸರ್ ಆಗಿತ್ತು. ಈ ಬಾಲ್ ಅಗತ್ಯಕ್ಕಿಂತ ಹೆಚ್ಚೇ ಬೌನ್ಸ್ ಆಗಿದ್ದು, ವೈಡ್ ಘೋಷಿಸಬೇಕು ಎಂಬುದು ಮ್ಯಾಥ್ಯೂ ವೇಡ್ ಅಭಿಪ್ರಾಯವಾಗಿತ್ತು. ಆದರೆ ಅಂಪಾಯರ್ ವೈಡ್ ಘೋಷಿಸಿರಲಿಲ್ಲ. ಇದರಿಂದ ವೇಡ್ ಅಸಮಾಧಾನಗೊಂಡರು.

ಕೊನೆಗೆ ಮ್ಯಾಥ್ಯೂ ವೇಡ್ ಮೂರನೇ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು. ಇದರಿಂದ ಪಂದ್ಯ ಭಾರತದ ಪರವಾಯಿತು. ಒಂದು ವೇಳೆ ವೇಡ್ ಕ್ರೀಸ್ ನಲ್ಲಿದ್ದಿದ್ದರೆ ಪಂದ್ಯ ಕಸಿದುಕೊಳ್ಳುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

India-Australia T20I: ಅಂತಿಮ ಪಂದ್ಯ ಗೆದ್ದು ಟೀಂ ಇಂಡಿಯಾ ಮಾಡಿದ ದಾಖಲೆಗಳು