ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ಹರಾಜಿಗೊಳಗಾಲಿರುವ ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಡಿಸೆಂಬರ್ 19 ರಂದು ದುಬೈನಲ್ಲಿ ಐಪಿಎಲ್ 2024 ಕ್ಕೆ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೂ ತಮ್ಮ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿತ್ತು.
ಇದೀಗ ಹರಾಜಿಗೆ ಮುನ್ನ ಹರಾಜಿಗೊಳಗಾಗಲಿರುವ ಆಟಗಾರರ ಲಿಸ್ಟ್ ರೆಡಿಯಾಗಿದೆ. ಒಟ್ಟು 333 ಆಟಗಾರರು ಹರಾಜಿಗೊಳಪಡಲಿದ್ದಾರೆ. ಈ ಪೈಕಿ 214 ಭಾರತೀಯ ಮತ್ತು 119 ವಿದೇಶೀ ಆಟಗಾರರು ಸೇರಿದ್ದಾರೆ. ಆದರೆ ಎಲ್ಲಾ ಫ್ರಾಂಚೈಸಿಗಳೂ ಒಟ್ಟು 77 ಆಟಗಾರರನ್ನು ಮಾತ್ರ ರಿಲೀಸ್ ಮಾಡಿರುವುದರಿಂದ ಅಷ್ಟು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.
ಈ ಬಾರಿಯ ಹರಾಜಿನಲ್ಲಿ 2 ಕೋಟಿ ಮೂಲಬೆಲೆಯ 23 ಆಟಗಾರರಿದ್ದಾರೆ. ಆದರೆ ಇವರಲ್ಲಿ ಬಹುಪಾಲು ವಿದೇಶೀ ಆಟಗಾರರೇ ಇದ್ದಾರೆ. ಭಾರತದ ಮೂವರು ಕ್ರಿಕೆಟಿಗರು ಮಾತ್ರ 2 ಕೋಟಿ ಮೂಲಬೆಲೆ ಪಡೆದಿದ್ದಾರೆ. ಹೀಗಾಗಿ ದುಬಾರಿ ಆಟಗಾರ ಎನ್ನುವ ಹಣೆಪಟ್ಟಿ ವಿದೇಶೀ ಆಟಗಾರನಿಗೇ ಸಿಗುವ ಸಾಧ‍್ಯತೆಯಿದೆ.