Select Your Language

Notifications

webdunia
webdunia
webdunia
webdunia

ಭಾರತ-ಆಫ್ರಿಕಾ ಟಿ20: ಮೈದಾನದಲ್ಲಿ ಗಾಜುಗಳನ್ನು ಪುಡಿಗಟ್ಟಿದ ರಿಂಕು ಸಿಂಗ್

ಭಾರತ-ಆಫ್ರಿಕಾ ಟಿ20: ಮೈದಾನದಲ್ಲಿ ಗಾಜುಗಳನ್ನು ಪುಡಿಗಟ್ಟಿದ ರಿಂಕು ಸಿಂಗ್
ಓವಲ್ , ಬುಧವಾರ, 13 ಡಿಸೆಂಬರ್ 2023 (09:39 IST)
Photo Courtesy: Twitter
ಓವಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಯುವ ಬ್ಯಾಟಿಗ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್ ನಡೆಸಿದರು.

ಹೊಡೆಬಡಿಯ ಆಟಕ್ಕೆ ಹೆಸರುವಾಸಿಯಾದ ರಿಂಕು ಸಿಂಗ್ ಆಸ್ಟ್ರೇಲಿಯಾ ವಿರುದ್ಧ ತೋರಿದ್ದ ಫಾರ್ಮ್ ನ್ನು ಈ ಸರಣಿಯಲ್ಲೂ ಮುಂದುವರಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ರಿಂಕು 39 ಎಸೆತಗಳಿಂದ ಅಜೇಯ 68 ರನ್ ಚಚ್ಚಿದರು. ಇದರಲ್ಲಿ 9 ಬೌಂಡರಿ, 2 ಸಿಕ್ಸರ್ ಸೇರಿತ್ತು.

ಅವರ ಬ್ಯಾಟಿನಿಂದ ಸಿಡಿದ ಭರ್ಜರಿ ಸಿಕ್ಸರ್ ಗೆ ಮೈದಾನದಲ್ಲಿನ ಗಾಜು ಪುಡಿ ಪುಡಿಯಾಗಿದೆ. ಒಂದು ಸಿಕ್ಸರ್ ನೇರವಾಗಿ ಪ್ರೆಸ್ ಬಾಕ್ಸ್ ನ ಗಾಜಿನ ಮೇಲೆ ಬಿದ್ದು ಪುಡಿ ಪುಡಿಯಾಗಿದೆ.

ಪಂದ್ಯದ 19 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂತೂ ರಿಂಕು ಸಿಂಗ್ ಭರ್ಜರಿ ಆಟಕ್ಕೆ ಆಫ್ರಿಕಾಗೆ ದೊಡ್ಡ ನಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

India-S Africa T20I: ಬೌಲರ್ ಗಳ ಕಳಪೆ ಪ್ರದರ್ಶನದಿಂದ ಸೋತ ಟೀಂ ಇಂಡಿಯಾ