Publish Date: Mon, 11 Dec 2023 (12:45 IST)
Updated Date: Mon, 11 Dec 2023 (13:10 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ.
ಕೆಲವು ಸಮಯ ಡೇಟಿಂಗ್ ನಲ್ಲಿದ್ದ ಈ ಸ್ಟಾರ್ ಕಪಲ್ 2017 ರಲ್ಲಿ ಶಾಸ್ತ್ರೋಸ್ತ್ರಕವಾಗಿ ವಿವಾಹವಾಗಿದ್ದರು. ಅವರ ಮದುವೆ ನಡೆದಿದ್ದ ಇಟೆಲಿಯಲ್ಲಿ. ಹೀಗಾಗಿ ಆಪ್ತೇಷ್ಟರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
ಇದೀಗ ಇಬ್ಬರೂ ಲಂಡನ್ ಪ್ರವಾಸದಲ್ಲಿದ್ದು, ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಅವರ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ.
ಮೈದಾನದಲ್ಲಿರುವಾಗಲೇ ಕೊಹ್ಲಿ ತಮ್ಮ ಪತ್ನಿ ಮೇಲೆ ಪ್ರೀತಿ ತೋರಿ ಅನೇಕ ಬಾರಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲ, ಆದರ್ಶ ದಂಪತಿ ಹೇಗಿರಬೇಕು ಎನ್ನುವುದಕ್ಕೆ ಈ ಪವರ್ ಫುಲ್ ಕಪಲ್ ಉದಾಹರಣೆ. ಜನ ಮೆಚ್ಚಿದ ಈ ಜೋಡಿಗೆ ಹ್ಯಾಪೀ ವೆಡ್ಡಿಂಗ್ ಆನಿವರ್ಸರಿ.