Publish Date: Tue, 12 Dec 2023 (10:22 IST)
Updated Date: Tue, 12 Dec 2023 (10:24 IST)
ಕೋಲ್ಕೊತ್ತಾ: ಏಕದಿನ ವಿಶ್ವಕಪ್ 2023 ರಲ್ಲಿ ಭಾರತದ ಸ್ಟಾರ್ ಆಗಿದ್ದ ಮೊಹಮ್ಮದ್ ಶಮಿಗೆ ಈಗ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.
ವಿಶ್ವಕಪ್ ಹೀರೋ ಎಲ್ಲೇ ಹೋದರೂ ಈಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಮನೆ ಮುಂದೆಯೂ ಅಭಿಮಾನಿಗಳ ಕ್ಯೂ ಇರುತ್ತದೆ. ತಮ್ಮ ಮೆಚ್ಚಿನ ಹೀರೋ ಜೊತೆ ಒಂದು ಫೋಟೋ, ಅಟೋಗ್ರಾಫ್ ಗಾಗಿ ಜನರು ಕ್ಯೂ ನಿಂತಿರುತ್ತಾರೆ.
ಈ ವಿಡಿಯೋಗಳನ್ನು ಸ್ವತಃ ಮೊಹಮ್ಮದ್ ಶಮಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಮೊನ್ನೆ ಭಾನುವಾರವಂತೂ ಜನರು ಸಾಲುಗಟ್ಟಿ ನಿಂತು ಶಮಿಯನ್ನು ಭೇಟಿಯಾಗಿದ್ದಾರೆ.
ಏಕದಿನ ವಿಶ್ವಕಪ್ ನಲ್ಲಿ ಈ ಬಾರಿ ಭಾರತ ಸೆಮಿಫೈನಲ್ ಗೆದ್ದಿದ್ದೇ ಶಮಿ ಅದ್ಭುತ ಬೌಲಿಂಗ್ ನಿಂದಾಗಿ. ತಾವಾಡಿದ ಎಲ್ಲಾ ಪಂದ್ಯಗಳಲ್ಲೂ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿದ್ದ ಶಮಿ ಕೊನೆಗೆ ಈ ವಿಶ್ವಕಪ್ ನ ಗರಿಷ್ಠ ವಿಕೆಟ್ ಟೇಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.