Select Your Language

Notifications

webdunia
webdunia
webdunia
webdunia

ICC Awards: ಐಸಿಸಿ ಮಾಸಿಕ ಪ್ರಶಸ್ತಿ ರೇಸ್ ನಲ್ಲಿ ಆಸೀಸ್ ಆಟಗಾರರ ಜೊತೆ ಮೊಹಮ್ಮದ್ ಶಮಿ

ICC Awards: ಐಸಿಸಿ ಮಾಸಿಕ ಪ್ರಶಸ್ತಿ ರೇಸ್ ನಲ್ಲಿ ಆಸೀಸ್ ಆಟಗಾರರ ಜೊತೆ ಮೊಹಮ್ಮದ್ ಶಮಿ
ದುಬೈ , ಶುಕ್ರವಾರ, 8 ಡಿಸೆಂಬರ್ 2023 (12:36 IST)
ದುಬೈ: ಪ್ರತೀ ತಿಂಗಳ ಪ್ರದರ್ಶನದ ಆಧಾರದಲ್ಲಿ ಐಸಿಸಿ ನೀಡುವ ಮಾಸಿಕ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ರೇಸ್ ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂಚೂಣಿಯಲ್ಲಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ವೇಗಿ ಮೊಹಮ್ಮದ್ ಶಮಿ ಪ್ರಶಸ್ತಿ ರೇಸ್ ನಲ್ಲಿರುವ ಏಕೈಕ ಟೀಂ ಇಂಡಿಯಾ ಆಟಗಾರ. ವಿಶೇಷವೆಂದರೆ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪಡೆದರೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ.

ಮೊಹಮ್ಮದ್ ಶಮಿ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಪ್ರಶಸ್ತಿ ರೇಸ್ ನಲ್ಲಿದ್ದಾರೆ. ವಿಶ್ವಕಪ್ ನಲ್ಲಿ ದ್ವಿಶತಕ ಸಿಡಿಸಿದ್ದ ಗ್ಲೆನ್ ಮ್ಯಾಕ್ಸ್ ವೆಲ್, ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್‍ ನಾಮಿನೇಟ್ ಆಗಿರುವ ಇತರ ಇಬ್ಬರು ಆಟಗಾರರು.

ಮೊಹಮ್ಮದ್ ಶಮಿ ನವಂಬರ್ ನಲ್ಲಿ ವಿಶ್ವಕಪ್ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನವಂಬರ್ ನಲ್ಲಿ 12.06 ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. ಸೆಮಿಫೈನಲ್ ನಲ್ಲಿ ಭಾರತ ಗೆದ್ದಿದ್ದೇ ಶಮಿ ಮ್ಯಾಜಿಕ್ ಸ್ಪೆಲ್ ನಿಂದಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ನೀವು ಬೇಡ! ಕೊಹ್ಲಿ ಜೊತೆ ಚರ್ಚಿಸಲಿರುವ ಬಿಸಿಸಿಐ