Select Your Language

Notifications

webdunia
webdunia
webdunia
webdunia

RCB ತಂಡ ಕೂಡಿಕೊಂಡ ಸ್ಟಾರ್ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ಗೆ ಕಿಡ್ನಿ ಸಂಬಂಧಿಸಿದ ಆರೋಗ್ಯ ಸಮಸ್ಯೆ

RCB ತಂಡ ಕೂಡಿಕೊಂಡ ಸ್ಟಾರ್ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ಗೆ ಕಿಡ್ನಿ ಸಂಬಂಧಿಸಿದ ಆರೋಗ್ಯ ಸಮಸ್ಯೆ
ಸಿಡ್ನಿ , ಗುರುವಾರ, 14 ಡಿಸೆಂಬರ್ 2023 (13:36 IST)
Photo Courtesy: Twitter
ಸಿಡ್ನಿ: ಆಸ್ಟ್ರೇಲಿಯಾ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ತಮಗೆ ಕಿಡ್ನಿಗೆ ಸಂಬಂಧಿಸಿದ ಖಾಯಿಲೆಯಿದೆ ಎಂದು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ನಿಂದ ಕ್ಯಾಮರೂನ್ ಗ್ರೀನ್ ರನ್ನು ಆರ್ ಸಿಬಿ ಟ್ರೇಡ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ ತಂಡದ ಸ್ಟಾರ್ ಕ್ರಿಕೆಟಿಗರಾಗಿರುವ ಗ್ರೀನ್ ಇದೀಗ ತಮ್ಮ ಆರೋಗ್ಯ ಸಮಸ್ಯೆ ಕುರಿತು ಬಹಿರಂಗಪಡಿಸಿದ್ದಾರೆ.

ವಿಶೇವೆಂದರೆ ಅವರಿಗೆ ಈ ಖಾಯಿಲೆ ಚಿಕ್ಕಂದಿನಿಂದಲೂ ಇದೆಯಂತೆ. ಹಾಗಿದ್ದರೂ ಕ್ರಿಕೆಟ್ ನಂತಹ ದೈಹಿಕವಾಗಿ ಶ್ರಮವಹಿಸಬೇಕಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ತಂದೆಯ ಪ್ರೋತ್ಸಾಹವೇ ಕಾರಣ ಎಂದಿದ್ದಾರೆ.

ಸದ್ಯಕ್ಕೆ ಇದು ಎರಡನೇ ಸ್ಟೇಜ್ ನಲ್ಲಿದೆ ಎಂದಿದ್ದಾರೆ. ಜನನದಿಂದಲೇ ಈ ಖಾಯಿಲೆಯಿದೆ ಎಂದು ನನ್ನ ಪೋಷಕರಿಗೆ ವೈದ್ಯರು ಹೇಳಿದ್ದರು. ಇದು ಒಟ್ಟು ಐದು ಸ್ಟೇಜ್ ಇದ್ದು, ಸದ್ಯಕ್ಕೆ ಎರಡನೇ ಸ್ಟೇಜ್ ನಲ್ಲಿದೆ ಎಂಬ ಆತಂಕಕಾರಿ ವಿಷಯವನ್ನು ಅವರು ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿಗೆ ಬ್ಯಾಂಡೇಜ್ ಹಾಕಿಕೊಂಡು ಬ್ಯಾಟಿಂಗ್ ಗೆ ಬಂದ ಕ್ರಿಕೆಟಿಗ! ಕಾರಣ ನೋಡಿ!