Publish Date: Thu, 14 Dec 2023 (13:08 IST)
Updated Date: Thu, 14 Dec 2023 (13:10 IST)
ಚೆನ್ನೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಬ್ಯಾಟಿಗ ಬಾಬ ಇಂದ್ರಜಿತ್ ಬಾಯಿಗೆ ಬ್ಯಾಂಡೇಜ್ ಹಾಕಿಕೊಂಡು ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದಿದ್ದಾರೆ.
ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಅವರು ಕ್ರೀಸ್ ಗೆ ಬಂದಾಗ ಎಲ್ಲರಿಗೂ ಅಚ್ಚರಿ. ಮಾತನಾಡುವುದು ಬಿಡಿ, ಬಾಯಿ ತೆರೆಯಲೂ ಆಗದ ಸ್ಥಿತಿಯಲ್ಲಿ ಅವರಿದ್ದರು.
ಬಳಿಕ ತಿಳಿದುಬಂದಿದ್ದೇನೆಂದರೆ ತಮಿಳುನಾಡು ಬ್ಯಾಟಿಗ ಇನಿಂಗ್ಸ್ ಬ್ರೇಕ್ ನಲ್ಲಿ ಬಾತ್ ರೂಂಗೆ ಹೋಗಿದ್ದಾಗ ಜಾರಿ ಬಿದ್ದಿದ್ದರು. ಪರಿಣಾಮ ಅವರ ತುಟಿಗೆ ಗಾಯವಾಗಿದೆ.
ತುಟಿಗೆ ಗಾಯವಾಗಿ ಸ್ಟಿಚ್ ಹಾಕಲಾಗಿದೆ. ಹೀಗಾಗಿ ಅವರ ಬಾಯಿಗೇ ಬ್ಯಾಂಡೇಜ್ ಹಾಕಲಾಗಿದೆ. ಇದರಿಂದಾಗಿ ಬಾಯಿ ತೆರೆಯಲೂ ಆಗ ಸ್ಥಿತಿಯಲ್ಲಿ ಅವರು ಕ್ರೀಸ್ ಗೆ ಬಂದು ಬ್ಯಾಟಿಂಗ್ ಮಾಡಿದ್ದರು. ಅವರ ಈ ಫೋಟೋ, ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.