ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ಶೋನಲ್ಲಿ ಅಸಭ್ಯವಾಗಿ ಮಾತನಾಡಿದ ತಪ್ಪಿಗೆ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿಚಾರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.
ಇಬ್ಬರ ವಿಚಾರಣೆಗೆ ಸುಪ್ರೀಂಕೋರ್ಟ್ ಫೆಬ್ರವರಿ 5 ರಂದು ದಿನ ನಿಗದಿಪಡಿಸಿದೆ. ಇದರಿಂದಾಗಿ ಇಬ್ಬರೂ ಕ್ರಿಕೆಟಿಗರ ಐಪಿಎಲ್ ಮತ್ತು ವಿಶ್ವಕಪ್ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.
ತನಿಖೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದರ ಮೇಲೆ ಇವರ ಭವಿಷ್ಯವೂ ನಿಂತಿದೆ. ತನಿಖೆ ಬೇಗನೇ ಮುಗಿಯದೇ ಇದ್ದರೆ ಕ್ರಿಕೆಟಿಗರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಘಟನೆಯ ನಂತರ ಇಬ್ಬರೂ ಕ್ರಿಕೆಟಿಗರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲ. ಹಾರ್ದಿಕ್ ಟ್ವಿಟರ್ ನಲ್ಲಿ ಕ್ಷಮೆ ಯಾಚಿಸಿದ್ದರೆ, ರಾಹುಲ್ ಇದುವರೆಗೆ ಪ್ರಕರಣದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ ಮತ್ತು ಯಾರ ಕಣ್ಣಿಗೂ ಕಾಣಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ