ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ 38 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಗೆ ಭಾರತೀಯ ವೇಗಿ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಆರಂಭದಲ್ಲಿಯೇ ಆಘಾತವಿಕ್ಕಿದರು. ಶಮಿ ಮೂರು ವಿಕೆಟ್, ಚಾಹಲ್ 2 ವಿಕೆಟ್ ಕಬಳಿಸಿದರು.
ಇವಿರಬ್ಬರು ಹಾಕಿಕೊಟ್ಟ ಹಾದಿಯನ್ನು ಮಧ್ಯಮ ಓವರ್ ಗಳಲ್ಲಿ ಮುಂದುವರಿಸಿದ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿ ಎದುರಾಳಿಗಳು ಮೇಲೇಳೆದಂತೆ ನೋಡಿಕೊಂಡರು. ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮಾತ್ರ 64 ರನ್ ಗಳಿಸಿದರು. ಹೊಡೆಬಡಿಯ ಆಟಗಾರ ರಾಸ್ ಟೇಲರ್ 24 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಆಟ ಬರಲಿಲ್ಲ.
ಹಾಗಿದ್ದರೂ ಇದು ನ್ಯೂಜಿಲೆಂಡ್ ಪಿಚ್ ನಲ್ಲಿ ಸುಲಭ ಗುರಿಯೇನೂ ಅಲ್ಲ. ಇಲ್ಲಿನ ಪಿಚ್ ಗಳು ಬೌಲರ್ ಗಳಿಗೆ ಹೆಚ್ಚು ಸಹಕಾರಿ. ಇಲ್ಲಿ ರನ್ ಗಳಿಸುವುದು ಕಠಿಣವೇ. ಹಾಗಾಗಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರೆ ಮಾತ್ರ ಗೆಲುವು ಸಾಧ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ