Publish Date: Wed, 23 Jan 2019 (09:22 IST)
Updated Date: Wed, 23 Jan 2019 (09:24 IST)
ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅತಿಥೇಯರಿಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.
ಇತ್ತೀಚೆಗಿನ ವರದಿ ಬಂದಾಗ ಕಿವೀಸ್ ನ ಐದನೇ ವಿಕೆಟ್ ಪತನಗೊಂಡಿದ್ದು, 24 ಓವರ್ ಗಳಲ್ಲಿ 107 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತೀಯ ಬೌಲರ್ ಗಳ ಬಿಗುವಿನ ದಾಳಿಗೆ ಕಿವೀಸ್ ಬ್ಯಾಟ್ಸ್ ಮನ್ ಗಳು ತತ್ತರಿಸಿದ್ದಾರೆ.
ಅದರಲ್ಲೂ ವೇಗಿ ಮೊಹಮ್ಮದ್ ಶಮಿ ಮತ್ತು ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಕಿತ್ತರೆ, ಕೇದಾರ್ ಜಾದವ್ ಒಂದು ವಿಕೆಟ್ ಕಬಳಿಸಿದ್ದಾರೆ. ಮಾರ್ಟಿನ್ ಗುಪ್ಟಿಲ್ ರನ್ನು ಔಟ್ ಮಾಡಿದ ಶಮಿ ಏಕದಿನ ಪಂದ್ಯಗಳಲ್ಲಿ 100 ನೇ ಬಲಿ ಪಡೆದರು. ಆ ಮೂಲಕ ಅತೀ ವೇಗವಾಗಿ ಅಂದರೆ 56 ಪಂದ್ಯಗಳಿಂದ 100 ವಿಕೆಟ್ ಕಿತ್ತ ವೇಗಿ ಎಂಬ ಭಾರತೀಯ ದಾಖಲೆ ಮಾಡಿದರು. ಇದಕ್ಕೂ ಮೊದಲು ಅತೀ ವೇಗದ 100 ವಿಕೆಟ್ ದಾಖಲೆ ಇರ್ಫಾನ್ ಪಠಾಣ್ ಹೆಸರಿನಲ್ಲಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ