ಮುಂಬೈ: ಯುಎಇನಲ್ಲಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಟೀಂ ಇಂಡಿಯಾ ಹೊಸದೊಂದು ದಾಖಲೆ ಮಾಡಲಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಭಾರತ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ. ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ.
ಈ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಪ್ರಾಯೋಜಕರ ಲೋಗೋ ಇಲ್ಲದ ಜೆರ್ಸಿ ಹಾಕಿ ಆಡಲಿದೆ. ಮೊನ್ನೆಯಷ್ಟೇ ಡ್ರೀಮ್ 11 ಪ್ರಾಯೋಜಕತ್ವಕ್ಕೆ ಕೊಕ್ ನೀಡಿದ್ದ ಬಿಸಿಸಿಐ ಈಗ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ. ಈ ಕಾರಣಕ್ಕೆ ಈ ಬಾರಿ ಟೀಂ ಇಂಡಿಯಾ ಆಟಗಾರರ ಜೆರ್ಸಿಯಲ್ಲಿ ಪ್ರಾಯೋಜಕರ ಲೋಗೋ ಇರಲ್ಲ.
ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಪ್ರಾಯೋಜಕರಿಲ್ಲದೇ ಏಷ್ಯಾ ಕಪ್ ಆಡಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರ ಜೆರ್ಸಿಯ ಮುಂಭಾಗ ಪ್ರಾಯೋಜಕರ ಹೆಸರೇ ಇಲ್ಲ. ಸೆಪ್ಟೆಂಬರ್ 12 ರೊಳಗಾಗಿ ಹೊಸ ಪ್ರಾಯೋಜಕರಿಗೆ ಬಿಡ್ ಸಲ್ಲಿಸಲು ಬಿಸಿಸಿಐ ಆಹ್ವಾನ ನೀಡಿದೆ. ಹೀಗಾಗಿ ಈ ಏಷ್ಯಾ ಕಪ್ ಟೂರ್ನಿ ಪೂರಾ ಪ್ರಾಯೋಜಕರಿರಲ್ಲ.