ಮುಂಬೈ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ರಾಜೀಮಾನೆ ನೀಡಿದ್ದಾರೆ. ಈ ರಾಜೀನಾಮೆ ಹಿಂದೆ ಪ್ರಮುಖ ಕಾರಣವೊಂದಿದೆ.
ರೋಜರ್ ಬಿನ್ನಿ ದಿಡೀರ್ ರಾಜೀನಾಮೆಗೆ ಕಾರಣವೂ ಇದೆ. 2017 ರ ಸುಪ್ರೀಂಕೋರ್ಟ್ ಆದೇಶಗಳ ಪ್ರಕಾರ 70 ವರ್ಷ ದಾಟಿದವರು ಬಿಸಿಸಿಐನಂತಹ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲ. ಕ್ರೀಡಾ ಸಂಸ್ಥೆಗಳ ಪದಾದಿಕಾರಿಗಳು ಒಟ್ಟು 9 ವರ್ಷಗಳು ಅಥವಾ ಸತತ 6 ವರ್ಷಕ್ಕಿಂತ ಹೆಚ್ಚು ಸೇವೆಯಲ್ಲಿ ಮುಂದುವರಿಯುವಂತಿಲ್ಲ.
ರೋಜರ್ ಬಿನ್ನಿ ಇತ್ತೀಚೆಗಷ್ಟೇ 70 ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹೀಗಾಗಿ ಅವರು ನಿಯಮದ ಪ್ರಕಾರ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಅಧ್ಯಕ್ಷರರ ಆಯ್ಕೆಯವರೆಗೂ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ರೋಜರ್ ಬಿನ್ನಿಗಿಂತ ಮೊದಲು ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. ಇದೀಗ ರೋಜರ್ ಬಿನ್ನಿ ಬಳಿಕ ಬಿಸಿಸಿಐ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.