ಮುಂಬೈ: ಟೀಂ ಇಂಡಿಯಾ ಟಿ20 ಮತ್ತು ಟೆಸ್ಟ್ ಮಾದರಿಗೆ ನಿವೃತ್ತಿ ಹೇಳಿರುವ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಬಿಸಿಸಿಐ ಕಠಿಣ ಷರತ್ತು ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ.
ಈ ಇಬ್ಬರೂ ದಿಗ್ಗಜ ಆಟಗಾರರು 2027 ರ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿಯಾಗುವ ಯೋಜನೆ ಹೊಂದಿದ್ದರು. ಆದರೆ ಇದೀಗ ಭಾರತ ತಂಡದಲ್ಲಿ ಯುವ ಆಟಗಾರರು ಈ ಹಿರಿಯ ಆಟಗಾರರ ಕೊರತೆಯೇ ಆಗದಂತೆ ಆಡುತ್ತಿದ್ದು ಬಿಸಿಸಿಐ ಈಗ ಇವರಿಬ್ಬರ ನಿವೃತ್ತಿಗೆ ಒತ್ತಡ ಹಾಕುತ್ತಿದೆ ಎನ್ನಲಾಗುತ್ತಿದೆ.
ಈ ಇಬ್ಬರೂ ಆಟಗಾರರು 2027 ರ ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಮುಂದುವರಿಯುವುದು ಅನುಮಾನವೆನ್ನಲಾಗುತ್ತಿದೆ. ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಈ ಇಬ್ಬರೂ ಆಟಗಾರರು ಆಡಲಿದ್ದಾರೆ.
ಏಕದಿನ ಮಾದರಿಯಲ್ಲಿ ಮುಂದುವರಿಯಬೇಕೆಂದರೆ ದೇಶೀಯ ಸರಣಿಗಳಲ್ಲಿ ಆಡಬೇಕು ಎನ್ನುವ ಷರತ್ತು ಈ ಇಬ್ಬರು ಆಟಗಾರರಿಗೆ ಹಾಕಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದರೆ ಈ ಇಬ್ಬರೂ ದಿಗ್ಗಜರಿಗೆ ನಿವೃತ್ತಿಯಾಗಲು ಬಿಸಿಸಿಐ ಸೂಚನೆ ನೀಡಬಹುದು. ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್ ವರೆಗೂ ರೋಹಿತ್, ಕೊಹ್ಲಿ ಆಡುವುದು ಅನುಮಾನವೆನ್ನಲಾಗುತ್ತಿದೆ.