ಮುಂಬೈ: ಟೀಂ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ. ಅಷ್ಟಕ್ಕೂ ಏನಾಗಿದೆ ಈ ವರದಿ ನೋಡಿ.
ರೋಹಿತ್ ಶರ್ಮಾರನ್ನು ಟೀಕಾಕಾರರು ಹೊಟ್ಟೆಯ ಕಾರಣಕ್ಕೆ ಟ್ರೋಲ್ ಮಾಡುತ್ತಲೇ ಇರುತ್ತಾರೆ. ಅವರು ಕೊಹ್ಲಿಯಷ್ಟು ಫಿಟ್ ಅಲ್ಲ. ದಡೂತಿ ದೇಹ ಹೊಂದಿದ್ದಾರೆ ಎಂಬ ಕಾರಣಕ್ಕೆ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ.
ಇದೀಗ ಟೆಸ್ಟ್ ಮಾದರಿಯಿಂದಲೂ ನಿವೃತ್ತರಾಗಿರುವ ರೋಹಿತ್ ಶರ್ಮಾ ಫ್ಯಾಮಿಲಿ ಜೊತೆ ಹಾಯಾಗಿದ್ದಾರೆ. ಕ್ರಿಕೆಟ್ ನಿಂದ ಸಂಪೂರ್ಣವಾಗಿ ದೂರವಾದಂತಿದ್ದಾರೆ. ಮೊನ್ನೆಯಷ್ಟೇ ಕುಟುಂಬ ಸಮೇತರಾಗಿ ಲಂಡನ್ ನಲ್ಲಿ ರಜೆಯಲ್ಲಿದ್ದರು.
ಇದೀಗ ಏರ್ ಪೋರ್ಟ್ ನಲ್ಲಿ ಮಗಳ ಕೈ ಹಿಡಿದುಕೊಂಡು ಬರುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ರೋಹಿತ್ ಶರ್ಮಾ ಹೊಟ್ಟೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮೊದಲಿಗಿಂತಲೂ ದಪ್ಪಗಾಗಿರುವ ಹೊಟ್ಟೆ ನೋಡಿ, ಕೊಹ್ಲಿಯ ಬಿಳಿ ಗಡ್ಡ ನೋಡಿ ನಗುವವರು ಒಮ್ಮೆ ರೋಹಿತ್ ರನ್ನು ನೋಡಬೇಕು. ಈ ಪಾಟಿ ಹೊಟ್ಟೆ ಬೆಳೆಸಿಕೊಂಡರೆ ಇವರು ಮುಂದೆ ಕ್ರಿಕೆಟ್ ಆಡಲು ಸಾಧ್ಯವೇ? ಇವರು 2027 ರ ವಿಶ್ವಕಪ್ ಆಡಲು ಫಿಟ್ ಆಗಿರವವರೇ ಎಂದು ಪ್ರಶ್ನೆ ಮಾಡಿದ್ದಾರೆ.