ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೂ ಭಾರತದ ಕೈ ತಪ್ಪಿ ಹೋಗುವ ಹೊಸ್ತಿಲಲ್ಲಿದೆ. ಈ ನಡುವೆ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ಮೇಲೆ ಸಿಟ್ಟಾಗಿದ್ದಾರೆ. ಈ ವ್ಯಕ್ತಿಗೆ ಅಹಂ ಜಾಸ್ತಿಯಾಯಿತು, ಇಲ್ಲಾಂದ್ರೆ ಹೀಗೆ ಮಾಡ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದಿದ್ದೇ ಇಲ್ಲ. ಆಸ್ಟ್ರೇಲಿಯಾ ಬಳಿಕ ಈಗ ಇಂಗ್ಲೆಂಡ್ ವಿರುದ್ಧವೂ ಟೆಸ್ಟ್ ಸರಣಿ ಸೋಲುವ ಲಕ್ಷಣವಿದೆ. ಹೀಗಾಗಿ ಅಭಿಮಾನಿಗಳ ಸಿಟ್ಟು ಮೇರೆ ಮೀರಿದೆ.
ಗಂಭೀರ್ ಗೆ ಅಹಂ ಜಾಸ್ತಿ. ಮೊಹಮ್ಮದ್ ಶಮಿಯಂತಹ ಅನುಭವಿಯನ್ನು ಫಿಟ್ನೆಸ್ ಇಲ್ಲ ಎಂಬ ನೆಪ ನೀಡಿ ಹೊರಗಿಟ್ಟರು. ರೋಹಿತ್ ಶರ್ಮಾ, ಕೊಹ್ಲಿ, ಅಶ್ವಿನ್ ರಂತಹ ಟೆಸ್ಟ್ ಸ್ಪೆಷಲಿಸ್ಟ್ ಗಳನ್ನು ನಿವೃತ್ತಿಯಾಗುವಂತೆ ಮಾಡಿದರು. ಈಗ ಬುಮ್ರಾ ಕೂಡಾ ಸಂಪೂರ್ಣವಾಗಿ ತಂಡಕ್ಕೆ ಲಭ್ಯರಿರುವುದಿಲ್ಲ. ಹೀಗಾಗಿ ತಂಡಕ್ಕೆ ವೇಗಿಗಳ ಕೊರತೆ ಕಾಡುತ್ತಿದೆ. ಈ ಸರಣಿಯಲ್ಲಿ ಅರ್ಷ್ ದೀಪ್ ಸಿಂಗ್ ಗೆ ಒಂದೇ ಒಂದು ಅವಕಾಶ ನೀಡಲಿಲ್ಲ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಬಲಿಷ್ಠವಾಗಿದ್ದ ಭಾರತವನ್ನು ಗಂಭೀರ್ ಕೈಯಾರೆ ಹಾಳು ಮಾಡಿದರು. ಎಲ್ಲವೂ ಅವರ ಅಹಂ ನಿಂದ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಈಗಲಾದರೂ ಬಿಸಿಸಿಐ ಗೌತಮ್ ಗಂಭೀರ್ ರನ್ನು ಟೆಸ್ಟ್ ಕೋಚಿಂಗ್ ನಿಂದ ಕಿತ್ತು ಹಾಕಬೇಕು. ಭಾರತದ ಬ್ಯಾಟಿಂಗ್ ಬಲಾಢ್ಯವಿದೆ. ಹಾಗಿದ್ದರೂ ಪಂದ್ಯ ಗೆಲ್ಲಲು ಚಾಣಕ್ಷ್ಯತನ ಬೇಕು. ಅದು ತಂಡದಲ್ಲಿ ಈಗ ಮಿಸ್ಸಿಂಗ್ ಆಗಿದೆ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.