Select Your Language

Notifications

webdunia
webdunia
webdunia
webdunia

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

KL Rahul

Krishnaveni K

ಲಂಡನ್ , ಶುಕ್ರವಾರ, 1 ಆಗಸ್ಟ್ 2025 (20:53 IST)
Photo Credit: X
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಆಟಗಾರರಾದ ಪ್ರಸಿದ್ಧ ಕೃಷ್ಣಗೆ ಕೆಎಲ್ ರಾಹುಲ್ ಕನ್ನಡದಲ್ಲೇ ಸಲಹೆ ನೀಡಿದ ವಿಡಿಯೋ ವೈರಲ್ ಆಗಿದೆ.

ಇಂದು ಎರಡನೇ ದಿನದಾಟದಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 224 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ನಡೆಸಿತು. ಆರಂಭದಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿತು. ಅದರಲ್ಲೂ ಪ್ರಸಿದ್ಧ ಕೃಷ್ಣ ದುಬಾರಿಯಾದರು.

ಹಾಗಿದ್ದರೂ ನಂತರ ಸುಧಾರಿಸಿಕೊಂಡು 3 ವಿಕೆಟ್ ಕಬಳಿಸಿದರು. ಇದೀಗ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದೆ. ಇನ್ನು ಪ್ರಸಿದ್ಧಗೆ ಕೆಎಲ್ ರಾಹುಲ್ ಹಿರಿಯಣ್ಣನಂತೆ ಬೌಲಿಂಗ್ ಮಾಡುವಾಗ ಕನ್ನಡದಲ್ಲೇ ಸಲಹೆ ನೀಡಿದ್ದಾರೆ.

ಮಗಾ.. ಬೀಳ್ತಾ ಇದ್ಯಾ ಅದು.. ಹಾಕಕ್ಕೋಗ್ತಿಲ್ಲ ನೀನು.. ಈ ಕಡೆಯಿಂದ ಹಾಕು ಸ್ವಲ್ಪ ಎಂದು ಕನ್ನಡದಲ್ಲೇ ಬುದ್ಧಿವಾದ ಹೇಳಿದ್ದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಮೈದಾನದಲ್ಲಿ ಕನ್ನಡಿಗ ಆಟಗಾರರು ಕನ್ನಡದಲ್ಲೇ ಮಾತನಾಡುವುದನ್ನು ಕೇಳುವುದೇ ಚಂದ. ಈ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ