Select Your Language

Notifications

webdunia
webdunia
webdunia
webdunia

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

Karun Nair

Krishnaveni K

ಲಂಡನ್ , ಶುಕ್ರವಾರ, 1 ಆಗಸ್ಟ್ 2025 (17:12 IST)
Photo Credit: X
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಅರ್ಧಶತಕ ಸಿಡಿಸಿದ ಕರುಣ್ ನಾಯರ್ ವಿಶೇಷ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅವರನ್ನು ಸಹ ಆಟಗಾರ ಪ್ರಸಿದ್ಧ ಕೃಷ್ಣ ಕನ್ನಡದಲ್ಲೇ ಚುಡಾಯಿಸುವ ತುಣುಕೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ ಭಾರತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಕರುಣ್ ನಾಯರ್ ಅರ್ಧಶತಕ ಸಿಡಿಸಿ ನಿನ್ನೆಯ ದಿನದಂತ್ಯಕ್ಕೆ ಅಜೇಯರಾಗುಳಿದಿದ್ದರು. ಹೀಗಾಗಿ ಅವರ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ.

ಕರುಣ್ ಅರ್ಧಶತಕ ಸಿಡಿಸಿದಾಗ ಹೆಚ್ಚು ಸಂಭ್ರಮಿಸಿದ್ದು ಕನ್ನಡಿಗರಾದ ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ. ಇಬ್ಬರೂ ಅಕ್ಕ-ಪಕ್ಕ ಕುಳಿತು ಕರುಣ್ ಆಟವನ್ನು ವೀಕ್ಷಿಸುತ್ತಿದ್ದರು. ಇನ್ನು, ಬಸ್ ನಲ್ಲಿ ತೆರಳುವಾಗಲೂ ಈ ಮೂವರು ಕನ್ನಡಿಗ ಆಟಗಾರರು ಜೊತೆಯಾಗಿಯೇ ಕುಳಿತಿದ್ದರು.

ಈ ವೇಳೆ ಕರುಣ್ ನಾಯರ್ ಗ್ಲಾಸ್ ಗೆ ಪಾನೀಯ ಸುರುವಿಕೊಂಡು ಕುಡಿಯಲು ಹೊರಟಿದ್ದರೆ ಪಕ್ಕದಲ್ಲಿದ್ದ ಪ್ರಸಿದ್ಧ ‘ಕೊಡು ಮಗಾ.. ಬ್ಲಷ್ ಮಾಡ್ತಾ ಇದ್ದಾನೆ’ ಎಂದು ಕಾಲೆಳೆದಿದ್ದಾರೆ. ಕರುಣ್ ಮುಖದಲ್ಲೂ ನಗುವೋ ನಗು. ಈ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ