ಲಂಡನ್: ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯಿಂದಾಗಿ ಅಡಚಣೆಗೊಳಗಾಗಿತ್ತು. ಇಂದು ಎರಡನೇ ದಿನವೂ ಮಳೆ ಬರುತ್ತಾ ಇಲ್ಲಿದೆ ಹವಾಮಾನ ವರದಿ.
ಮೊದಲ ದಿನದಾಟದಲ್ಲಿ ಮಳೆಯ ನಡುವೆಯೇ ಆಟ ನಡೆದಿತ್ತು. ಭೋಜನ ವಿರಾಮದ ವೇಳೆ ಮಳೆ ಸುರಿದಿದ್ದರಿಂದ ತಡವಾಗಿ ಪಂದ್ಯ ಪುನರಾರಂಭಗೊಂಡಿತು. ನಿನ್ನೆ ಕೇವಲ 64 ಓವರ್ ಗಳಷ್ಟೇ ಪಂದ್ಯ ನಡೆದಿದೆ. ಮಳೆಯಿಂದಾಗಿ ಭಾರತದ ಬ್ಯಾಟಿಂಗ್ ಕೂಡಾ ಕೊಂಚ ತಡಬಡಾಯಿಸಿತ್ತು.
ಇಂದು ದಿ ಓವಲ್ ಮೈದಾನದ ಸುತ್ತ ಇಂದೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹೀಗಾಗಿ ಇಂದೂ ದಿನಪೂರ್ತಿ ಆಟ ನಡೆಯುವುದು ಅನುಮಾನವಾಗಿದೆ. ಇಂದು ಗರಿಷ್ಠ ತಾಪಮಾನ 19 ಡಿಗ್ರಿ ಮತ್ತು ಕನಿಷ್ಠ 13 ಡಿಗ್ರಿಯಷ್ಟು ತಾಪಮಾನವಿರಲಿದೆ.
ಹೀಗಾಗಿ ಇಂದು ದಿನಪೂರ್ತಿ ಆಟ ನಡೆಯುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು. ನಿನ್ನೆಯೂ ಇದೇ ರೀತಿಯ ವಾತಾವರಣವಿತ್ತು. ಪೂರ್ತಿ ದಿನದಾಟವಾಗಿದ್ದರೂ ಮಳೆಯ ನಡುವೆ ಅಲ್ಪಸ್ವಲ್ಪ ಪಂದ್ಯ ನಡೆಯಬಹುದು. ಎರಡು ದಿನ ಮಳೆ ಅಡ್ಡಿಯಾದರೆ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತ.