ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ವೇಳೆ ಗೆಳೆಯ ಪ್ರಸಿದ್ಧ ಕೃಷ್ಣನಿಗಾಗಿ ಕೆಎಲ್ ರಾಹುಲ್ ಅಂಪಾಯರ್ ಜೊತೆ ಮೈದಾನದಲ್ಲೇ ಕಿತ್ತಾಡಿದ ವಿಡಿಯೋ ವೈರಲ್ ಆಗಿದೆ.
ಜೋ ರೂಟ್ ಗೆ ಬೌಲಿಂಗ್ ಮಾಡುತ್ತಿದ್ದಾಗ ಪ್ರಸಿದ್ಧ ಕೃಷ್ಣ ಸ್ಲೆಡ್ಜಿಂಗ್ ಮಾಡಿದ್ದರು. ಮುಂದಿನ ಎಸೆತದಲ್ಲೇ ರೂಟ್ ಬೌಂಡರಿ ಗಳಿಸಿದರು. ಇದರ ನಂತರ ಪ್ರಸಿದ್ಧ ಮತ್ತೆ ಜೋ ರೂಟ್ ರನ್ನು ಕೆಣಕಿದರು. ಇಬ್ಬರ ನಡುವೆ ವಾಗ್ವಾದವಾಯಿತು.
ಈ ವೇಳೆ ಮಧ್ಯಪ್ರವೇಶಿಸಿದ ಅಂಪಾಯರ್ ಪ್ರಸಿದ್ಧಗೆ ಮಾತ್ರ ಬುದ್ಧಿ ಹೇಳಿದರು. ಈ ವೇಳೆ ನಾಯಕ ಶುಭಮನ್ ಗಿಲ್ ಸೇರಿದಂತೆ ಕೆಲವು ಆಟಗಾರರು ಸೇರಿದ್ದರು. ಅಷ್ಟರಲ್ಲಿ ಸಿಟ್ಟಿನಲ್ಲೇ ಬಂದ ಕೆಎಲ್ ರಾಹುಲ್ ನೀವು ನಮಗೆ ಮಾತ್ರ ಯಾಕೆ ಬುದ್ಧಿ ಹೇಳ್ತೀರಿ ಎಂಬಂತೆ ವಾಗ್ವಾದಕ್ಕಿಳಿದೇ ಬಿಟ್ಟರು.
ಸಾಮಾನ್ಯವಾಗಿ ರಾಹುಲ್ ಮೈದಾನದಲ್ಲಿ ಕೂಲ್ ಆಗಿರುತ್ತಾರೆ. ಅವರು ಕಿತ್ತಾಡಿದ ಸಂದರ್ಭ ತೀರಾ ವಿರಳ. ಆದರೆ ಇಂದು ಗೆಳೆಯನಿಗಾಗಿ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವಿಡಿಯೋ ಇಲ್ಲಿದೆ ನೋಡಿ.