ಶನಿವಾರ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ನ 3 ನೇ ದಿನದ ಅಂತಿಮ ಸೆಷನ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ಧ ರವೀಂದ್ರ ಜಡೇಜಾ ಅವರು ಸ್ಟೇಡಿಯಂನಲ್ಲಿ ಕೂತಿದ್ದ ವ್ಯಕ್ತಿಯ ಕೆಂಪು ಬಣ್ಣದ ಟೀ ಶರ್ಟ್ ಏಕಾಗ್ರತೆಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಅವರಿಗೆ ಬೇರೆ ಟೀ ಶರ್ಟ್ ನೀಡಿದ ಘಟನೆ ನಡೆಯಿತು. ಈ ಸಂಬಂಧ ಕೆಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಜಡೇಜಾ ಕೋರಿಕೆ ಬೆನ್ನಲ್ಲೇ ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದ ವೀಕ್ಷಕನಿಗೆ ಬೂದು ಬಣ್ಣದ ಟೀ ಶರ್ಟ್ ಅನ್ನು ನೀಡಲಾಯಿತು.
ದಿನದ ಅಂತಿಮ ಹಂತದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಕೆಂಪು ಟೀ ಶರ್ಟ್ ಧರಿಸಿ ಪಂದ್ಯಾಟವನ್ನು ನೋಡುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾಗೆ ಕೆಂಪು ಬಣ್ಣದ ಟೀ ಶರ್ಟ್ ಏಕಾಗ್ರತೆಯನ್ನು ಹಾಳು ಮಾಡುತ್ತಿದೆ ಎಂದು ಅಂಪೈರ್ ಬಳಿ ಹೇಳಿಕೊಂಡಿದ್ದಾರೆ.
ಕೂಡಲೇ ಅವರಿಗೆ ಬೂದು ಬಣ್ಣದ ಟೀ ಶರ್ಟ್ ಅನ್ನು ನೀಡಲಾಯಿತು. ಶರ್ಟ್ ಬದಲಾಯಿಸಿದ್ದಕ್ಕೆ ಕ್ರಿಸ್‌ನಲ್ಲಿದ್ದ ಜಡೇಜಾ ಆ ವ್ಯಕ್ತಿಯನ್ನು ನೋಡಿ ಥಂಬ್ಸ್ ಅಪ್ ನೀಡಿದರು ಮತ್ತು ನಂತರ ಜೇಮಿ ಓವರ್ಟನ್ ಅವರ ಬೌನ್ಸರ್ ಅನ್ನು ಬೌಂಡರಿಗೆ ಹೊಡೆದರು.
ಜಡೇಜಾ ಇಂಗ್ಲೆಂಡ್ ಬೌಲರ್‌ಗಳಿಗೆ ದೊಡ್ಡ ಕಂಟಕವಾಗಿ ಮುಂದುವರೆದರು ಮತ್ತು ಸರಣಿಯಲ್ಲಿ 500 ರನ್‌ಗಳ ಗಡಿ ದಾಟಿದರು.