Select Your Language

Notifications

webdunia
webdunia
webdunia
webdunia

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್

Sampriya

ನವದೆಹಲಿ , ಸೋಮವಾರ, 4 ಆಗಸ್ಟ್ 2025 (19:06 IST)
Photo Credit X
ನವದೆಹಲಿ: ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ  ವಿರಾಟ್ ಕೊಹ್ಲಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಇದು ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಪಂದ್ಯಾಟದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐತಿಹಾಸಿಕ ಗೆಲುಸು ಸಾಧಿಸಿದ ಬೆನ್ನಲ್ಲೇ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ತಮ್ಮ ಪೋಸ್ಟ್‌ನಲ್ಲಿ, ತರೂರ್ ಅವರು ಕೊಹ್ಲಿಯ ಅನುಪಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ. 

ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಲವು ಬಾರಿ ಮಿಸ್ ಮಾಡಿಕೊಂಡಿದ್ದೇನೆ. ಅದರಲ್ಲೂ, ಈ (ಅಂತಿಮ) ಟೆಸ್ಟ್‌ ಪಂದ್ಯದ ವೇಳೆ ಮಿಸ್‌ ಮಾಡಿಕೊಂಡಷ್ಟು ಯಾವಾಗಲೂ ಮಿಸ್‌ ಮಾಡಿಕೊಂಡಿರಲಿಲ್ಲ. ಅವರ ಎದೆಗಾರಿಕೆ, ಆಟದ ತೀವ್ರತೆ, ಅವರ ಸ್ಫೂರ್ತಿದಾಯಕ ಉಪಸ್ಥಿತಿ, ಅಪಾರವಾದ ಬ್ಯಾಟಿಂಗ್ ಕೌಶಲಕ್ಕೆ ಫಲಿತಾಂಶವನ್ನೇ ಬದಲಿಸಬಲ್ಲ ತಾಕತ್ತು ಇತ್ತು. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆಯಲು ತಡವಾಯಿತೇ? ವಿರಾಟ್‌, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ!' ಎಂದು ಬರೆದುಕೊಂಡಿದ್ದಾರೆ. 

ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಕೊಹ್ಲಿ, ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದರು. 

ಅದಕ್ಕೂ ಮೊದಲು, ರೋಹಿತ್‌ ಶರ್ಮಾ ಅವರೂ ನಿವೃತ್ತಿ ಘೋಷಿಸಿದ್ದರು. ಹೀಗಾಗಿ, ಯುವ ನಾಯಕ ಶುಭಮನ್‌ ಗಿಲ್‌ ಅವರು ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್