Select Your Language

Notifications

webdunia
webdunia
webdunia
webdunia

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಹುಬ್ಬಳ್ಳಿ ನೇಹಾ ಹಿರೇಮತ್

Sampriya

ಹುಬ್ಬಳ್ಳಿ , ಸೋಮವಾರ, 4 ಆಗಸ್ಟ್ 2025 (18:39 IST)
Photo Credit X
ಹುಬ್ಬಳ್ಳಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ ನೇಹಾ ಹಿರೇಮಠ ಹತ್ಯೆ ಸಂಬಂಧ  ಆರೋಪಿ ಫಯಾಜ್  ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿಆರ್ ಮಹತ್ವದ ಆದೇಶ ನೀಡಿದ್ದಾರೆ. ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದಲೂ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಫಯಾಜ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ. 

ಆರೋಪಿ ಪರವಾಗಿ ಬೆಳಗಾವಿಯ ಜೆಡ್ ಎಂ ಹತ್ತರಕಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಕ್ಕೆ  ಸಿಐಡಿ ಪರ ವಕೀಲರಾದ ಎಸ್‌ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬದ ಪರ ವಕೀಲ ರಾಘವೇಂದ್ರ ಮುತ್ತಗಿಕರ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. 

ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಆರೋಪಿ ಫಯಾಜ್‌ಗೆ ಇದೇ ತಿಂಗಳ 6ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌