Select Your Language

Notifications

webdunia
webdunia
webdunia
webdunia

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಕೊಪ್ಪಳ ಇನ್‌ಸ್ಟಾಗ್ರಾಮ್ ಪ್ರೇಮ ಪ್ರಕರಣ

Sampriya

ಕೊಪ್ಪಳ , ಮಂಗಳವಾರ, 8 ಜುಲೈ 2025 (20:34 IST)
ಕೊಪ್ಪಳ: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಮದುವೆ ನೆಪದಲ್ಲಿ ಆಕೆಯ ಮನೆಯಲ್ಲಿಯೇ ಅತ್ಯಾಚಾರ ಎಸಗಿದ  ರಮೇಶ ಎಂ ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸಷೆನ್ಸ್‌ ನ್ಯಾಯಾಲಯವು 20 ವರ್ಷ ಜೈಲು ಹಾಗೂ ₹25ಸಾವಿರ ದಂಡ ವಿಧಿಸಿದೆ. 

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ತುಮಕೂರು ಜಿಲ್ಲೆ ಬೀರನಕಲ್ ಗ್ರಾಮದ ರಮೇಶ ಎಂ. ಎಂಬಾತನಿಗೆ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಈ ಆದೇಶ ನೀಡಿದ್ದಾರೆ.

ರಮೇಶ ಇನ್‌ಸ್ಟಾಗ್ರಾಮ್ ಮೂಲಕ ಬಾಲಕಿಯನ್ನು ಪರಿಚಯಿಸಿಕೊಂಡು ಮೇಲಿಂದ ಮೇಲೆ ಫೋನ್‌ನಲ್ಲಿ ಮಾತನಾಡಿ ಸಲುಗೆ ಬೆಳೆಸಿಕೊಂಡಿದ್ದ. 2023ರ ಅಕ್ಟೋಬರ್‌ನಲ್ಲಿ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ರಮೇಶ ನಗರದ ಬಾಲಕಿ ಮನೆಗೆ ತೆರಳಿ ನಾವಿಬ್ಬರೂ ಮದುವೆಯಾಗೋಣ ಎಂದು ನಂಬಿಸಿದ್ದಾನೆ. ಬಳಿಕ ಮನೆಯಲ್ಲಿಯೇ ಅತ್ಯಾಚಾರ ಎಸಗಿದ್ದಾನೆ ಎಂದು ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಿಳಾ ಠಾಣೆಯ ಈಗಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಂಜಿನೇಯ ಡಿ.ಎಸ್‌. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ