Select Your Language

Notifications

webdunia
webdunia
webdunia
webdunia

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

Suryakumar Yadav-Sanju Samson
ಮುಂಬೈ: ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ20 ಟೂರ್ನಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ ವಿವರ ಇಲ್ಲಿದೆ ನೋಡಿ.

ಈ ಬಾರಿ ಏಷ್ಯಾ ಕಪ್ ಟಿ20 ಫಾರ್ಮ್ಯಾಟ್ ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ಆಯ್ಕೆ ಕುರಿತಂತೆ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ತಂಡದಲ್ಲಿ ಯಾವೆಲ್ಲಾ ಆಟಗಾರರು ಇರಬಹುದು ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದೆ. ಯುಎಇ, ಪಾಕಿಸ್ತಾನ ಮತ್ತು ಒಮನ್ ತಂಡದೊಂದಿಗೆ ಭಾರತ ಟೂರ್ನಮೆಂಟ್ ನ ಲೀಗ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ ನೋಡಿ.

ಸೆಪ್ಟೆಂಬರ್ 10:     ಭಾರತ-ಯುಎಇ      ಸಮಯ: ರಾತ್ರಿ 7.30 ಕ್ಕೆ
ಸೆಪ್ಟೆಂಬರ್ 14:     ಭಾರತ-ಪಾಕಿಸ್ತಾನ   ಸಮಯ: ರಾತ್ರಿ 7.30 ಕ್ಕೆ
ಸೆಪ್ಟೆಂಬರ್ 19:     ಭಾರತ-ಒಮನ್      ಸಮಯ: ರಾತ್ರಿ 7.30 ಕ್ಕೆ

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ