ನವದೆಹಲಿ: ಅಹಮದಾಬಾದ್‌ನಲ್ಲಿ ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ನಲ್ಲಿ ಆಪರೇಷನ್ ಸಿಂಧೂರ್‌ಗೆ  ವಿಶೇಷ ಗೌರವ ಸಲ್ಲಿಸಲಿದೆ.
									
			
			 
 			
 
 			
					
			        							
								
																	ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವಾ ಮುಖ್ಯಸ್ಥರನ್ನು ಆಹ್ವಾನಿಸಿ, ಈ ವೇಳೆ ವಿಶೇಷ ಗೌರವ ಸಲ್ಲಿಸಲಿದೆ.  ಸಮಾರೋಪ ಸಮಾರಂಭದಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಅವರ "ವೀರ ಪ್ರಯತ್ನಗಳಿಗೆ" ಗೌರವವನ್ನು ನೀಡುತ್ತದೆ.
									
										
								
																	ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮ ಹೇಳಿಕೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
"ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಆಚರಿಸಲು ಅಹಮದಾಬಾದ್‌ನಲ್ಲಿ ನಡೆಯುವ ಐಪಿಎಲ್ ಫೈನಲ್‌ಗೆ ನಾವು ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ಸೈನಿಕರಿಗೆ ಆಹ್ವಾನವನ್ನು ನೀಡಿದ್ದೇವೆ" ಎಂದು  ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.
									
											
							                     
							
							
			        							
								
																	ದೇಶದ ಸಶಸ್ತ್ರ ಪಡೆಗಳ "ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆ" ಯನ್ನು ಬಿಸಿಸಿಐ ವಂದಿಸುತ್ತದೆ ಎಂದು ಸೈಕಿಯಾ ಹೇಳಿದರು.
									
			                     
							
							
			        							
								
																	ಜನರಲ್ ಉಪೇಂದ್ರ ದ್ವಿವೇದಿ ಸೇನಾ ಮುಖ್ಯಸ್ಥರಾಗಿದ್ದು, ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ನೌಕಾ ಮುಖ್ಯಸ್ಥರಾಗಿದ್ದಾರೆ. ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ವಾಯುಪಡೆಯ ಮುಖ್ಯಸ್ಥರಾಗಿದ್ದಾರೆ.