ಲಕ್ನೋ: ಐಪಿಎಲ್ 2025 ರಲ್ಲಿ ನಾಳೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ದಿಗ್ವೇಶ್ ರಾಠಿ ತಾಕತ್ತಿದ್ದರೆ ಕೊಹ್ಲಿ ವಿಕೆಟ್ ತೆಗೆದು ನೋಟ್ ಬುಕ್ ಸ್ಟೈಲ್ ನಲ್ಲಿ ಸಂಭ್ರಮಿಸಲಿ ನೋಡೋಣ. ಇಂತಹದ್ದೊಂದು ಡ್ರಾಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ದಿಗ್ವೀಶ್ ರಾಠಿ ಈ ಐಪಿಎಲ್ ಕೂಟದಲ್ಲಿ ವಿಕೆಟ್ ಕೀಳುವುದಕ್ಕಿಂತ ಹೆಚ್ಚು ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ನಿಂದಲೇ ಸುದ್ದಿಯಾಗಿದ್ದಾರೆ. ಎದುರಾಳಿ ಆಟಗಾರನನ್ನು ಔಟ್ ಮಾಡಿದ ಬಳಿಕ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಮಾಡಿ ಕಿಚಾಯಿಸುತ್ತಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಒಂದು ಪಂದ್ಯದ ನಿಷೇಧವನ್ನೂ ಅನುಭವಿಸಿದ್ದಾರೆ.
ನಾಳೆ ಆರ್ ಸಿಬಿ ವಿರುದ್ಧ ಲಕ್ನೋ ತಂಡ ಆಡಲಿದೆ. ಹೇಳಿ ಕೇಳ ವಿರಾಟ್ ಕೊಹ್ಲಿ ಈ ರೀತಿ ಎಲ್ಲಾ ಕೆಣಕಿದರೆ ಸುಮ್ಮನೇ ಕೂರುವ ಮಗನೇ ಅಲ್ಲ. ಅದರಲ್ಲೂ ಈ ಸೆಲೆಬ್ರೇಷನ್ ನನ್ನು ಕೆಲವು ವರ್ಷಗಳ ಹಿಂದೆ ಕೊಹ್ಲಿಯೇ ಎದುರಾಳಿಗಳಿಗೆ ಮಾಡಿದವರು.
ಒಂದು ವೇಳೆ ನಾಳೆಯ ಪಂದ್ಯದಲ್ಲಿ ದಿಗ್ವೇಶ್ ಕೊಹ್ಲಿ ಎದುರೇ ಈ ರೀತಿ ಸೆಲೆಬ್ರೇಷನ್ ಮಾಡಿದರೆ ಅವರ ಪ್ರತ್ಯುತ್ತರ ಹೇಗಿರಬಹುದು ಎಂದು ಊಹಿಸಿಕೊಂಡೇ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಇದು ನಮಗಂತೂ ಭರ್ಜರಿ ಸಿನಿಮಾ ಅನುಭವ ಕೊಡಲಿದೆ ಎಂದು ಕೊಹ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.