ಲಕ್ನೋ: ಎದುರಾಳಿ ಆಟಗಾರರ ವಿಕೆಟ್ ಪಡೆದ ಬಳಿಕ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಮಾಡುವ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಾಠಿ ಇಂದು ನಡೆಯಲಿರುವ ಆರ್ ಸಿಬಿ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ವಿಕೆಟ್ ಕಿತ್ತು ಅದೇ ರೀತಿ ಸೆಲೆಬ್ರೇಟ್ ಮಾಡುತ್ತಾರಾ? ಇದಕ್ಕೆ ಸ್ವತಃ ದಿಗ್ವೇಶ್ ನೀಡಿದ ಉತ್ತರದ ವಿಡಿಯೋ ಈಗ ವೈರಲ್ ಆಗಿದೆ.
ಪ್ರತೀ ಪಂದ್ಯದಲ್ಲೂ ದಿಗ್ವೇಶ್ ರಾಠಿ ಎದುರಾಳಿ ಬ್ಯಾಟಿಗನ ವಿಕೆಟ್ ಪಡೆದರೆ ಮುಖಕ್ಕೆ ಹೊಡೆದ ಹಾಗೆ ನೋಟ್ ಬುಕ್ ಸ್ಟೈಲ್ ಸೆಲಬ್ರೇಷನ್ ಮಾಡುತ್ತಾರೆ. ಹಿಂದೊಮ್ಮೆ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ರೀತಿ ಶತಕ ಸಿಡಿಸಿ ಸೆಲೆಬ್ರೇಷನ್ ಮಾಡಿದ್ದರು.
ಈಗ ದಿಗ್ವೇಶ್ ಅದೇ ರೀತಿ ಸೆಲೆಬ್ರೇಷನ್ ಮಾಡಿ ಈಗಾಗಲೇ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಇಂದು ಆರ್ ಸಿಬಿ ವಿರುದ್ಧ ಲಕ್ನೋ ಪಂದ್ಯ ನಡೆಯಲಿದ್ದು, ಇಂದೂ ದಿಗ್ವೇಶ್ ಕೊಹ್ಲಿ ಮುಂದೆ ಈ ರೀತಿ ಸೆಲೆಬ್ರೇಟ್ ಮಾಡ್ತಾರಾ? ಈ ಒಂದು ಪ್ರಶ್ನೆಯನ್ನು ಅವರಿಗೆ ಅಭಿಮಾನಿಗಳು ಕೇಳಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಎಲ್ಲರೂ ಕ್ಷಣ ಕಾಲ ನಕ್ಕರು. ದಿಗ್ವೇಶ್ ಮೊಗದಲ್ಲೂ ನಗುವಿತ್ತು. ಬಳಿಕ ಇಲ್ಲ ಎನ್ನುವಂತೆ ಸೈಲೆಂಟಾಗಿ ತಲೆ ಅಲ್ಲಾಡಿಸಿದ್ದಾರೆ. ಇದಕ್ಕೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಕೊಹ್ಲಿ ಎದುರು ಒಮ್ಮೆ ಈ ರೀತಿ ಸೆಲೆಬ್ರೇಟ್ ಮಾಡಿ ನೋಡಿ. ಅಲ್ಲಿಗೆ ನಿಮ್ಮ ಕೆರಿಯರ್ ಮುಗಿಯುತ್ತೆ ಎಂದಿದ್ದಾರೆ.