ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯ ಇಂದು ನಡೆಯಲಿದೆ. ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇದು ಆರ್‌ಸಿಬಿ ತಂಡಕ್ಕೆ ಮಹತ್ವದ ಪಂದ್ಯ. ಪಾಯಿಂಟ್ಸ್ ಪಟ್ಟಿಯಲ್ಲೊ ಮೊದಲೆರಡು ಸ್ಥಾನ ಪಡೆಯುವ ದೃಷ್ಟಿಯಿಂದ ಈ ಪಂದ್ಯ ಮಹತ್ವವಾದುದು. ಆದರೆ, ಇದಕ್ಕೂ ಮುನ್ನವೇ ಬೆಂಗಳೂರು ತಂಡ ಅಗ್ರಸ್ಥಾನಕ್ಕೇರಿ ಹೊಸ ದಾಖಲೆ ಬರೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈತನಕ ಒಂದೂ ಬಾರಿಯೂ ಕಪ್ ಗೆಲ್ಲಿಲ್ಲ. ಪ್ರತಿಬಾರಿಯೂ ಈ ಬಾರಿ ಕಪ್ ನಮ್ದೆ ಎಂಬ ಘೋಷಣೆಗೂ ಕಡಿಮೆಯಿಲ್ಲ. ಈ ಬಾರಿ ಮತ್ತೆ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇಂದಿನ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದರೆ ಮೊದಲ ಕ್ವಾಲಿಫೈಯರ್‌ಗೆ ಆರ್‌ಸಿಬಿ ಅರ್ಹತೆ ಪಡೆಯಲಿದೆ.
ಈ ಸಲ ಟ್ರೋಫಿ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿರುವ ಕಾರಣ ತಂಡದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಏತನ್ಮಧ್ಯೆ, ಪ್ಲೇಆಫ್ ಪಂದ್ಯಗಳಿಗೂ ಮುಂಚಿತವಾಗಿ ಬೆಂಗಳೂರು ತಂಡ ಹೊಸ ದಾಖಲೆ ಬರೆದಿದೆ. ಇದರೊಂದಿಗೆ, ಈ ಸಾಧನೆ ಮಾಡಿದ ಮೊದಲ ಐಪಿಎಲ್ ಫ್ರಾಂಚೈಸಿ ಎನಿಸಿಕೊಂಡಿದೆ.
ಇನ್ಸ್ಟಾಗ್ರಾಮ್ನಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತಂಡವಾಗಿ ದಾಖಲೆ ಬರೆದಿದೆ. ಇದರೊಂದಿಗೆ ಐದು ಬಾರಿ ಚಾಂಪಿಯನ್ಸ್ ತಂಡಗಳಾದ ಮುಂಬೈ ಇಂಡಿಯನ್ನು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಹಿಂದಿಕ್ಕಿದೆ. ತಂಡದ ಸ್ಟಾರ್ ಆಟಗಾರರು ವಿಶೇಷವಾಗಿ ವಿರಾಟ್ ಕೊಹ್ಲಿಯ ಜನಪ್ರಿಯತೆಯು ತಂಡದ ಫಾಲೋವರ್ಸ್ಗಳ ಹೆಚ್ಚಳಕ್ಕೂ ಕಾರಣವಾಗಿದೆ.
ಐದು ಬಾರಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ಸ್ಟಾಗ್ರಾಮ್ನಲ್ಲಿ 1.86 ಕೋಟಿ ಮಿಲಿಯನ್ ಫಾಲೋವರ್ಸ್ ನೊಂದಿಗೆ 2ನೇ ಸ್ಥಾನದಲ್ಲಿದ್ದರೇ, ಮುಂಬೈ ಇಂಡಿಯನ್ಸ್ ತಂಡ 1.8 ಕೋಟಿ ಅನುಯಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ ಒಂದೇ ಒಂದು ಬಾರಿ ಕಪ್ ಗೆಲ್ಲದ ಆರ್‌ಸಿಬಿ ಈ ಎರಡೂ ತಂಡಗಳ ದಾಖಲೆ ಗಳನ್ನು ಧೂಳೀಪಟ ಮಾಡಿ ಅಗ್ರ ಸ್ಥಾನಕ್ಕೆ ತಲುಪಿದೆ. ಇದೀಗ ಆರ್‌ಸಿಬಿ ತಂಡದ ಫಾಲೋವರ್ಸ್ಗಳ ಸಂಖ್ಯೆ 2 ಕೋಟಿ ಮಿಲಿಯನ್ಗೆ ತಲುಪಿದೆ.