Select Your Language

Notifications

webdunia
webdunia
webdunia
webdunia

Rohit Sharma: ರೋಹಿತ್ ಶರ್ಮಾ ಪ್ಲ್ಯಾನ್ ಬೇರೆಯೇ ಇತ್ತು, ಸಡನ್ ನಿವೃತ್ತಿ ಘೋಷಿಸಿದ್ದೇಕೆ

Rohit Sharma

Krishnaveni K

ಮುಂಬೈ , ಬುಧವಾರ, 21 ಮೇ 2025 (09:35 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಮಾದರಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ದಿಡೀರ್ ನಿವೃತ್ತಿ ಘೋಷಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ರೋಹಿತ್ ಸಡನ್ ನಿವೃತ್ತಿಗೆ ಕಾರಣವೇನೆಂದು ಈಗ ಬಯಲಾಗಿದೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೇ ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಲು ಬಿಸಿಸಿಐ ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ. ಹಾಗಿದ್ದರೂ ರೋಹಿತ್ ಗೆ ನಿವೃತ್ತಿಯಾಗುವ ಯೋಚನೆಯಿರಲಿಲ್ಲ. ಇಂಗ್ಲೆಂಡ್ ಸರಣಿ ಆಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದರು.

ಆದರೆ ಈಗ ಇಂಗ್ಲೆಂಡ್ ಸರಣಿಗೆ ಕೆಲವೇ ದಿನಗಳ ಮೊದಲು ಅವರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅಸಲಿಗೆ ರೋಹಿತ್ ಇಂಗ್ಲೆಂಡ್ ಪ್ರವಾಸಕ್ಕೆ ತಂಡದ ಭಾಗವಾಗಿರಲು ಬಯಸಿದ್ದರು. ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ನಡುವೆಯೇ ವಿದಾಯ ಪಂದ್ಯವಾಡಲು ಬಯಸಿದ್ದರು. ಆದರೆ ಇದನ್ನು ಬಿಸಿಸಿಐ ನಿರಾಕರಿಸಿತ್ತು ಎನ್ನಲಾಗಿದೆ.

ಧೋನಿ ಕೂಡಾ 2014 ರಲ್ಲಿ ಇದೇ ರೀತಿ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿಯಂತೆ ಮಾಡಲು ಹೊರಟ ರೋಹಿತ್ ಗೆ ಬಿಸಿಸಿಐನಿಂದ ಒಪ್ಪಿಗೆ ಸಿಗಲಿಲ್ಲ. ಹೀಗಾಗಿಯೇ ರೋಹಿತ್ ದಿಡೀರ್ ನಿವೃತ್ತಿಗೆ ಮುಂದಾದರು ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಸಿಬಿ ಅಭಿಮಾನಿಗಳಿಗೆ ಕಹಿಸುದ್ದಿ: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯ ಸ್ಥಳಾಂತರ