ಮುಂಬೈ: ಐಪಿಎಲ್ 2025 ರಲ್ಲಿ ಕಾಂಪಿಟೀಷನ್ ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಕೆಎಲ್ ರಾಹುಲ್ ಮತ್ತು ಶುಬ್ಮನ್ ಗಿಲ್ ನಡುವೆ ಈಗ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿಗೆ ಪೈಪೋಟಿ ಶುರುವಾಗಿದೆ.
ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದರೆ, ಇತ್ತ ಶುಬ್ಮನ್ ಗಿಲ್ ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದಾರೆ. ಇಬ್ಬರೂ ಪೈಪೋಟಿಗೆ ಬಿದ್ದವರಂತೆ ರನ್ ಗಳಿಸುತ್ತಿದ್ದಾರೆ.
ಇದುವರೆಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ಶುಬ್ಮನ್ ಗಿಲ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಕೆಎಲ್ ರಾಹುಲ್ ತಾವೂ ಈ ಸ್ಥಾನದ ಪ್ರಬಲ ಸ್ಪರ್ಧಿ ಎಂದು ಸಾರಿದ್ದಾರೆ.
ಹೀಗಾಗಿ ಈಗ ರಾಹುಲ್ ಅಭಿಮಾನಿಗಳೂ ಗಿಲ್ ಬದಲು ಅವರೇ ಟೆಸ್ಟ್ ತಂಡದ ನಾಯಕರಾಗಲಿ ಎನ್ನುತ್ತಿದ್ದಾರೆ. ರಾಹುಲ್ ಗೆ ಈಗಾಗಲೇ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಿ ಅನುಭವವಿದೆ. ಗಿಲ್ ಇನ್ನೂ ಅನನುಭವಿ. ಹೀಗಾಗಿ ಈಗ ಟೆಸ್ಟ್ ನಾಯಕತ್ವಕ್ಕೆ ಇಬ್ಬರೂ ಆಟಗಾರರ ನಡುವೆ ಭಾರೀ ಪೈಪೋಟಿ ಶುರುವಾಗಿದೆ.