ಹೈದರಾಬಾದ್: ಪ್ಲೇ ಆಫ್ ಗೇರುವ ನಿರ್ಣಾಯಕ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗರು ಕೈ ಕೊಟ್ಟಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಇಂದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಬೇಕಿದ್ದಾಗ ಯಾವತ್ತೂ ಆಡಲ್ಲ ಎಂದು ಟ್ರೋಲ್ ಗೊಳಗಾಗಿದ್ದಾರೆ.
ಐಪಿಎಲ್ 2025 ರ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡುತ್ತಿದೆ. ಈ ಪಂದ್ಯದಲ್ಲಿ ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿ ಸಂಕಷ್ಟದಲ್ಲಿದೆ. ಕರುಣ್ ನಾಯರ್ ಶೂನ್ಯ ಗಳಿಸಿದರೆ, ಫಾ ಡು ಪ್ಲೆಸಿಸ್ 3, ಅಭಿಷೇಕ್ ಪೊರೆಲ್ 8 ರನ್ ಗಳಿಸಿದರೆ ಕೆಎಲ್ ರಾಹುಲ್ 10 ರನ್ ಗಳಿಸಿ ಔಟಾದರು.
ಡೆಲ್ಲಿ ಈ ಐಪಿಎಲ್ ನಲ್ಲಿ ಆರಂಭದಲ್ಲಿ ಸತತ ಗೆಲುವುಗಳ ಮೂಲಕ ಈ ಬಾರಿ ಕಪ್ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಕೂಟದ ಅರ್ಧಭಾಗಕ್ಕೆ ಬಂದರೂ ಇನ್ನೂ ನಿಗದಿತ ಓಪನರ್ ಗಳನ್ನು ಕಂಡುಕೊಂಡಿಲ್ಲ. ಬ್ಯಾಟಿಂಗ್ ನಲ್ಲಿ ಈ ಅತಿಯಾದ ಪ್ರಯೋಗವೇ ಡೆಲ್ಲಿ ಸೋಲಿಗೆ ಕಾರಣವಾಗುತ್ತಿದೆಯೇನೋ ಎಂಬ ಅನುಮಾನ ಮೂಡಿದೆ.
ಇಂದು ತಂಡ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಕೆಎಲ್ ರಾಹುಲ್ ತಂಡಕ್ಕೆ ಆಧಾರವಾಗುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ರಾಹುಲ್ ಕೈಕೊಟ್ಟರು. ಹೀಗಾಗಿ ಅಭಿಮಾನಿಗಳು ಬೇಕಿದ್ದಾಗಲೇ ತಂಡಕ್ಕೆ ಕೈ ಕೊಡುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.