ಧರ್ಮಶಾಲಾ: ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಮಾಡುವಾಗ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್. ಯಾಕೆ ಎಂದು ತಿಳಿಯಲು ಈ ವಿಡಿಯೋ ನೋಡಿ.
ಐಪಿಎಲ್ 2025 ರಲ್ಲಿ ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಲಕ್ನೋ 37 ರನ್ ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 236 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು.
ಲಕ್ನೋ ನಾಯಕ ರಿಷಭ್ ಪಂತ್ 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅವರು ಔಟಾದ ಬಾಲ್ ನ್ನು ಎದುರಿಸಿದ ಪರಿ ನೋಡಿದರೆ ಅವರ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್ ಎಂಬಂತಿತ್ತು.
ಅಜ್ಮತ್ತುಲ್ಲಾ ಬೌಲಿಂಗ್ ನ್ನು ಸಿಕ್ಸರ್ ಗಟ್ಟುವ ಯತ್ನದಲ್ಲಿ ರಿಷಭ್ ಕ್ಯಾಚ್ ಔಟ್ ಆದರು. ಈ ಬಾಲ್ ಎತ್ತಿ ಹೊಡೆಯುವ ರಭಸದಲ್ಲಿ ರಿಷಭ್ ತಮ್ಮ ಬ್ಯಾಟ್ ನ್ನೂ ಜ್ಯಾವೆಲಿನ್ ಥ್ರೋನಂತೆ ಬಿಸಾಕಿದ್ದರು. ಈ ಸಂದರ್ಭದಲ್ಲಿ ಅವರ ಪಕ್ಕದಲ್ಲಿಯೇ ಫೀಲ್ಡರ್ ಇದ್ದಿದ್ದರೆ ಅವರ ಮೇಲೆ ಬ್ಯಾಟ್ ಬೀಳುತ್ತಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.