ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಟೀಂ ಇಂಡಿಯಾ ಆಟಗಾರರ ಜೆರ್ಸಿ ಪ್ರಾಯೋಜಕತ್ವ ವಹಿಸಲು ಆಹ್ವಾನ ನೀಡಿದೆ. ಆದರೆ ಪ್ರಾಯೋಕರಿಗೆ ಕೆಲವೊಂದು ಷರತ್ತುಗಳಿವೆ. ಅದೇನು ನೋಡಿ.
ಟೀಂ ಇಂಡಿಯಾಗೆ ಪ್ರಾಯೋಜಕತ್ವ ವಹಿಸುವುದು ಎಂದರೆ ಯಾವುದೇ ಸಂಸ್ಥೆಗೆ ಪ್ರತಿಷ್ಠೆಯ ವಿಚಾರ. ಈ ಹಿಂದೆ ಡ್ರೀಮ್ 11 ಭಾರತ ತಂಡದ ಪ್ರಾಯೋಜಕತ್ವ ಹೊಂದಿತ್ತು. ಆದರೆ ಕೇಂದ್ರ ಸರ್ಕಾರ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಡ್ರೀಮ್ 11 ಪ್ರಾಯೋಜಕತ್ವಕ್ಕೆ ಬಿಸಿಸಿಐ ಕೊಕ್ ನೀಡಿತ್ತು. ಹೀಗಾಗಿ ಈಗ ಹೊಸ ಪ್ರಾಯೋಜಕರಿಗೆ ಹುಡುಕಾಟ ನಡೆಸಿದೆ.
ಸೆಪ್ಟೆಂಬರ್ 12 ರೊಳಗಾಗಿ ಬಿಡ್ ಸಲ್ಲಿಸಲು ಅವಕಾಶವಿದೆ. ಆದರೆ ಬಿಡ್ ಸಲ್ಲಿಸುವ ಸಂಸ್ಥೆಗಳು ಈ ಕೆಳಗಿನ ಷರತ್ತುಗಳನ್ನು ಪಾಲಿಸಬೇಕು.
-ಯಾವುದೇ ಆಲ್ಕೋಹಾಲ್ ಉತ್ಪನ್ನಗಳ ಸಂಸ್ಥೆಗಳು ಬಿಡ್ ಸಲ್ಲಿಸುವಂತಿಲ್ಲ. ಇಂತಹ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯಲು ಬಿಸಿಸಿಐ ಸ್ಪಷ್ಟವಾಗಿ ನಿರಾಕರಿಸುತ್ತದೆ.
-ಬೆಟ್ಟಿಂಗ್ ಅಥವಾ ಜೂಜು ಪ್ರಚೋದಿಸುವ ಉತ್ಪನ್ನಗಳು, ಸಂಸ್ಥೆಗಳಿಗೆ ಅವಕಾಶವಿಲ್ಲ.
-ಕ್ರಿಪ್ಟೊ ಕರೆನ್ಸಿ ಭಾರತದಲ್ಲಿ ನಿಷೇಧವಿದ್ದು, ಇದಕ್ಕೆ ಸಂಬಂಧಿಸಿದವರೂ ಬಿಡ್ ಸಲ್ಲಿಸುವಂತಿಲ್ಲ.
-ತಂಬಾಕು ಉತ್ಪನ್ನಗಳ ಸಂಸ್ಥೆಗಳಿಗೂ ನಿಷೇಧವಿದೆ.
-ಆನ್ ಲೈನ್ ಗೇಮ್, ಮನಿ ಗೇಮ್ ಪ್ರಚೋದಿಸುವ ಸಂಸ್ಥೆಗಳಿಗೂ ಅವಕಾಶವಿಲ್ಲ.
ಈ ನಿಯಮಗಳಿಗೆ ಬದ್ಧರಾಗುವ ಸಂಸ್ಥೆಗಳು ಟೈಟಲ್ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.