ಮುಂಬೈ: ರೋಹಿತ್ ಶರ್ಮಾ ಫಿಟ್ ಆಗಿಲ್ಲ, ಹೊಟ್ಟೆ ದಪ್ಪ ಎಂದೆಲ್ಲಾ ಏನೇ ತೆಗಳಬಹುದು. ಆದರೆ ಬೆಂಗಳೂರಿನ ಎನ್ ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾದ ಅವರು ಪಡೆದ ಅಂಕ ನೋಡಿದ್ರೆ ರೋಹಿತ್ ಅಂದ್ರೆ ಸುಮ್ನೇನಾ ಎಂದು ನೀವು ಹೇಳಬಹುದು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡಿದ್ದೇ ಕೊನೆ. ಅದಾದ ಬಳಿಕ ಹಿಟ್ ಮ್ಯಾನ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಲು ಅವರು ಸಜ್ಜಾಗಿದ್ದಾರೆ.
ಇದಕ್ಕಾಗಿ ಅವರು ನಿಯಮದ ಪ್ರಕಾರ ನಿನ್ನೆ ಫಿಟ್ನೆಸ್ ಪರೀಕ್ಷೆಗೊಳಗಾದರು. ಯೋ ಯೋ ಟೆಸ್ಟ್ ನಲ್ಲಿ ರೋಹಿತ್ ಅತ್ಯುತ್ತಮ ಅಂಕ ಗಳಿಸಿದ್ದಾರೆ ಎಂದು ವರದಿಯಾಗಿದೆ. ಒಟ್ಟು 19.4 ಅಂಕ ಗಳಿಸಿ ರೋಹಿತ್ ಫಿಟ್ನೆಸ್ ಪಾಸ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಯುವ ಆಟಗಾರರಿಗೂ ಈ ಸ್ಕೋರ್ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಸದೃಢ ಮೈಕಟ್ಟು, ವಯಸ್ಸು ಯಾವುದೂ ಅಲ್ಲದೇ ಇದ್ದರೂ ರೋಹಿತ್ ಫಿಟ್ನೆಸ್ ಪರೀಕ್ಷೆಯಲ್ಲಂತೂ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ.