Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

Sanju Samson

Krishnaveni K

ದುಬೈ , ಶನಿವಾರ, 30 ಆಗಸ್ಟ್ 2025 (16:38 IST)
ದುಬೈ: ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಈಗಾಗಲೇ ನಿಗದಿಯಾಗಿರುವುದಕ್ಕಿಂತ ಅರ್ಧಗಂಟೆ ತಡವಾಗಿ ಆರಂಭವಾಗಲಿದೆ. ಅದಕ್ಕೆ ಕಾರಣ ಇಲ್ಲಿದೆ ನೋಡಿ.

ಭಾರತ, ಪಾಕಿಸ್ತಾನ, ಯುಎಇ ಸೇರಿದಂತೆ ಪ್ರಮುಖ ಏಷ್ಯನ್ ಕ್ರಿಕೆಟ್ ರಾಷ್ಟ್ರಗಳು ಪಾಲ್ಗೊಳ್ಳಲಿರುವ ಟೂರ್ನಿ ಇದಾಗಿದೆ. ಈ ಪಂದ್ಯಾವಳಿ ಈಗಾಗಲೇ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಮತ್ತು ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಆರಂಭವಾಗಬೇಕಿತ್ತು.

ಆದರೆ ಇದೀಗ ಯುಎಇನಲ್ಲಿ ಹವಾಮಾನ ಗಮನದಲ್ಲಿಟ್ಟುಕೊಂಡು ಅರ್ಧಗಂಟೆ ತಡವಾಗಿ ಪಂದ್ಯ ಆರಂಭಿಸಲು ತಿರ್ಮಾನಿಸಲಾಗಿದೆ. ಅಂದರೆ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಎಲ್ಲಾ ಪಂದ್ಯಗಳು ಆರಂಭವಾಗಲಿದೆ.

ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಭಾರತ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್