ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಒಬ್ಬೊಬ್ಬ ಆಟಗಾರರಿಗೂ ಒಂದೊಂದು ಬಿರುದು ಕೊಟ್ಟಿದ್ದಾರೆ. ಯಾರಿಗೆ ಏನು ಬಿರುದು ಇಲ್ಲಿದೆ ವಿವರ.
ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಡೆಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಸಂದರ್ಶಕರು ಟೀಂ ಇಂಡಿಯಾದ ಯಾವ ಆಟಗಾರರು ಯಾವುದಕ್ಕೆ ಬೆಸ್ಟ್ ಎಂದು ಪ್ರಶ್ನೆ ಮಾಡಿದ್ದರು.
ಈ ಪೈಕಿ ಟೀಂ ಇಂಡಿಯಾದ ಮೋಸ್ಟ್ ಸ್ಟೈಲಿಶ್ ಆಟಗಾರ ಯಾರು ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅವರು ಶುಭಮನ್ ಗಿಲ್ ಹೆಸರು ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ದೇಸೀ ಹುಡುಗ ಎಂದಿದ್ದಾರೆ. ಆದರೆ ಇದರಲ್ಲಿ ರೋಹಿತ್ ಶರ್ಮಾ ಹೆಸರು ಎಲ್ಲೂ ಇಲ್ಲ.
ತಮಾಷೆಯ ಆಟಗಾರ ಎಂದರೆ ರಿಷಭ್ ಪಂತ್, ವೇಗಕ್ಕೆ ಜಸ್ಪ್ರೀತ್ ಬುಮ್ರಾ, ಚಿನ್ನದ ಕೈ ಎಂದರೆ ನಿತೀಶ್ ರಾಣಾ, ಸ್ಥಿರ ಆಟಗಾರ ರಾಹುಲ್ ದ್ರಾವಿಡ್, ಕ್ಲಚ್ ಎಂದರೆ ಸಚಿನ್ ತೆಂಡುಲ್ಕರ್, ಡೆತ್ ಓವರ್ ಸ್ಪೆಷಲಿಸ್ಟ್ ಎಂದರೆ ಜಹೀರ್ ಖಾನ್, ರನ್ ಮೆಷಿನ್ ವಿವಿಎಸ್ ಲಕ್ಷ್ಮಣ್ ಎಂದು ಗಂಭೀರ್ ಹೇಳಿದ್ದಾರೆ.