ಮುಂಬೈ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಜೆರ್ಸಿಗೆ ಪ್ರಾಯೋಜಕತ್ವ ವಹಿಸುವವರೇ ಇರಲ್ವಾ? ಹೀಗೊಂದು ಅನುಮಾನ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ.
ಟೀಂ ಇಂಡಿಯಾ ಜೆರ್ಸಿಯ ಪ್ರಾಯೋಜಕತ್ವವನ್ನು ಡ್ರೀಮ್ 11 ವಹಿಸಿಕೊಂಡಿತ್ತು. ಆದರೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಆನ್ ಲೈನ್ ಗೇಮಿಂಗ್ ಆಪ್ ಗಳ ತಡೆ ಕಾಯ್ದೆ ಪಾಸ್ ಮಾಡಿದೆ. ಇದರಿಂದಾಗಿ ಈಗ ಟೀಂ ಇಂಡಿಯಾ ಜೆರ್ಸಿಯಲ್ಲಿ ಡ್ರೀಮ್ 11 ಲೋಗೋ ಬಳಸುವಂತಿಲ್ಲ.
ಹೀಗಾಗಿ ಏಷ್ಯಾ ಕಪ್ ಗೆ ಮುನ್ನ ಬಿಸಿಸಿಐ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ ವಹಿಸಲು ಆಹ್ವಾನ ನೀಡಿದೆ. ಆದರೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಇನ್ನು ಕೆಲವೇ ದಿನ ಬಾಕಿಯಿದ್ದು ಅಷ್ಟರಲ್ಲಿ ಹೊಸ ಪ್ರಾಯೋಜಕರು ಬರುವುದು ಅನುಮಾನ.
ಹೀಗಾಗಿ ಈ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಪ್ರಾಯೋಜಕರಿಲ್ಲದ ಜೆರ್ಸಿ ತೊಡುವ ಸಾಧ್ಯತೆಯಿದೆ. ಮುಂದಿನ ವರ್ಷದವರೆಗೆ ಡ್ರೀಮ್ 11 ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಈಗ ಕೇಂದ್ರದ ನಿಯಮದಿಂದ ಪ್ರಾಯೋಜಕತ್ವದಿಂದ ಡ್ರೀಮ್ 11 ಗೆ ಕತ್ತರಿ ಹಾಕಬೇಕಿದೆ.