ಅನುಷ್ಕಾ ಶೆಟ್ಟಿಯನ್ನು ಲವ್ ಮಾಡ್ತೀರಾ ಎಂದಿದ್ದಕ್ಕೆ ಪ್ರಭಾಸ್ ಹೇಳಿದ್ದು ಕೇಳಿದರೆ ನಿಜಕ್ಕೂ ಶಾಕ್!

ಗುರುವಾರ, 20 ಡಿಸೆಂಬರ್ 2018 (09:48 IST)
ಮುಂಬೈ: ಬಾಹುಬಲಿ ತಾರೆಯರಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಆಫ್ ಸ್ಕ್ರೀನ್ ನಲ್ಲೂ ಜೋಡಿಯಾಗಬೇಕೆಂಬುದು ಅವರ ಅಭಿಮಾನಿಗಳ ಬಯಕೆ. ಅಷ್ಟೇ ಏಕೆ ಈ ತಾರಾ ಜೋಡಿ ಡೇಟಿಂಗ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.


ಈ ಬಗ್ಗೆ ಕರಣ್ ಜೋಹರ್ ನಡೆಸಿಕೊಡುವ ಶೋನಲ್ಲಿ ಪ್ರಭಾಸ್ ಬಾಯ್ಬಿಟ್ಟಿದ್ದಾರೆ. ಕರಣ್ ನೀವು ಯಾರನ್ನಾದರೂ ಡೇಟ್ ಮಾಡ್ತಿದ್ದೀರಾ ಎಂದಿದ್ದಕ್ಕೆ ಪ್ರಭಾಸ್ ಇಲ್ಲ ಎಂದಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಕರಣ್ ನೀವು ಅನುಷ್ಕಾರನ್ನು ಲವ್ ಮಾಡ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೂ ಪ್ರಭಾಸ್ ಇಲ್ಲ, ಇಂತಹ ರೂಮರ್ಸ್ ಎಲ್ಲಾ ನೀವೇ ಹಬ್ಬಿಸಿದ್ದು ಎಂದು ಹಾರಿಕೆಯ ಉತ್ತರ ನೀಡಿದರು. ಆದರೆ ಶೋ ಕೊನೆಗೆ ಪ್ರಭಾಸ್ ಗೆ ಕರಣ್ ಈ ಶೋನಲ್ಲಿ ನೀವು ಏನಾದರೂ ಸುಳ್ಳು ಹೇಳಿದ್ದೀರಾ ಎಂದಿದ್ದಕ್ಕೆ ಪ್ರಭಾಸ್ ‘ಹೌದು’ ಎಂದಿದ್ದಾರೆ. ಹಾಗಾಗಿ ಈ ‘ಸುಳ್ಳು’ ತಮ್ಮ ರಿಲೇಷನ್ ಶಿಪ್ ಬಗ್ಗೆ ಹೇಳಿಕೊಂಡಿದ್ದಾ? ಹೀಗಂತ ಇದೀಗ ಗುಸು ಗುಸು ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಧಾರಾಣಿ ಮಗಳು ನಿಧಿ ಬಗ್ಗೆ ಕೇಳಿಬಂದ ಈ ಸುದ್ದಿ ನಿಜವಾ?!