ಪ್ರಭಾಸ್ ಭೇಟಿ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಯಶ್

ಸೋಮವಾರ, 10 ಡಿಸೆಂಬರ್ 2018 (09:49 IST)
ಬೆಂಗಳೂರು: ಮೊನ್ನೆಯಷ್ಟೇ ಮುಂಬೈಯಲ್ಲಿ ರಾಕಿಂಗ್ ಸ್ಟಾರ್ ಯಶ್ ಬಾಹುಬಲಿ ಖ್ಯಾತಿಯ ಪ್ರಭಾಸ್ ರನ್ನು ಭೇಟಿಯಾಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಈ ಬಗ್ಗೆ ನಿನ್ನೆ ಸ್ವತಃ ಯಶ್ ಸ್ಪಷ್ಟನೆ ನೀಡಿದ್ದಾರೆ.


ಪತ್ನಿ ರಾಧಿಕಾ ಪಂಡಿತ್ ಮತ್ತು ಮಗಳ ಜತೆ ಪತ್ರಿಕಾಗೋಷ್ಠಿಗೆ ಹಾಜರಾದ ಯಶ್, ತಮ್ಮ ವೈಯಕ್ತಿಕ ಬದುಕಿನ ಜತೆಗೆ ಪ್ರಭಾಸ್ ಭೇಟಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಪ್ರಭಾಸ್ ಭೇಟಿ ಹಿಂದಿನ ಉದ್ದೇಶದ ಬಗ್ಗೆ ಪತ್ರಕರ್ತರು ಕೇಳಿದಾಗ ಯಶ್ ಇದೊಂದು ಸಾಮಾನ್ಯ ಭೇಟಿಯಾಗಿತ್ತಷ್ಟೇ ಎಂದಿದ್ದಾರೆ.

‘ನಾನು ಮುಂಬೈಗೆ ಹೋಗಿದ್ದಾಗ ಅವರೂ ಮುಂಬೈಯಲ್ಲೇ ಇದ್ದಾರೆ ಅಂತ ಗೊತ್ತಾಯ್ತು. ಹೀಗಾಗಿ ಇಬ್ಬರೂ ಮಾತಾಡ್ಕೊಂಡು ಭೇಟಿಯಾಗಿ ಒಂದೆರಡು ಗಂಟೆ ಜತೆಯಾಗಿ ಊಟ ಮಾಡಿ ಬಂದ್ವಿ ಅಷ್ಟೇ. ಇದರಲ್ಲಿ ಬೇರೆ ಏನೂ ಇಲ್ಲ’ ಎಂದು ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇನ್ ಸ್ಟಾಗ್ರಾಂ ಸೇರಿದ್ರು ರಾಕಿಂಗ್ ಸ್ಟಾರ್ ಯಶ್