Publish Date: Wed, 10 Oct 2018 (13:36 IST)
Updated Date: Wed, 10 Oct 2018 (13:38 IST)
ಪ್ರಸ್ತುತ ಹಾಲಿವುಡ್ ನಟ ವಿಲ್ ಸ್ಮಿತ್ ಇಂಡಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ಬಾಲಿವುಡ್‌ನ ಪ್ರಸಿದ್ಧ ನಡ ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರೊಂದಿಗೆ ಸಮಯ ಕಳೆದಿದ್ದಾರೆ.
ಸ್ಮಿತ್ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಆಟದಲ್ಲಿ ಅತ್ಯುತ್ತಮವಾಗಿರುವ ಇಬ್ಬರಿಂದ ಬಾಲಿವುಡ್‌ನ ಎಳೆಯನ್ನು ಕಲಿಯುತ್ತಿದ್ದೇನೆ! @karanjohar & @ranveersingh. ಕ್ಯಾಮರಾ: @alansilfen.” ಎನ್ನುವ ತಲೆಬರಹದ ಅಡಿಯಲ್ಲಿ ತಾವು ಕರಣ್ ಹಾಗೂ ರಣವೀರ್ ಸಿಂಗ್ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕರಣ್ ಸಹ ಅದೇ ಫೋಟೋವನ್ನು ಹಂಚಿಕೊಂಡಿದ್ದು, "ಮನಸ್ಸಿದ್ದರೆ ಮಾರ್ಗ!!!! @ranveersingh @willsmith ಇಂದು #sohohousemumbai ನಲ್ಲಿ ಶಾಟ್ ಚೆನ್ನಾಗಿತ್ತು." ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಇವರಿಬ್ಬರೂ ಕಾಫೀ ವಿತ್ ಕರಣ್ ಮುಂದಿನ ಸಂಚಿಕೆಯಲ್ಲಿ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.