Publish Date: Wed, 12 Sep 2018 (11:36 IST)
Updated Date: Wed, 12 Sep 2018 (11:40 IST)
ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಯ ಬಗ್ಗೆ ಕೇಳಿದ ಪತ್ರಕರ್ತರೊಬ್ಬರ ಮೇಲೆ ಕೋಪಗೊಂಡು ಕಿಡಿಕಾರಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷ ನವೆಂಬರ್ 10 ರಂದು ಇಟಲಿಯ ಲೇಕ್ ಕೊಮೊದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲಾ ಕಡೆ ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ಇತ್ತೀಚೆಗೆ ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಅವರಲ್ಲಿ ಪತ್ರಕರ್ತನೊಬ್ಬ ಮದುವೆ ಬಗ್ಗೆ ಕೇಳಿದಾಗ ಕೋಪಗೊಂಡ ನಟಿ “ಮದುವೆ ಕುರಿತು ನೀವು ಕೇಳುವ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ಅದು ನನ್ನ ವೈಯುಕ್ತಿಕ ವಿಚಾರ. ಇಂತಹಾ ಕಾರ್ಯಕ್ರಮದಲ್ಲಿ ಏನು ಪ್ರಶ್ನೆ ಕೇಳಬೇಕಿತ್ತೋ ಅದನ್ನು ಕೇಳಿ” ಎಂದು ಗರಂ ಆಗಿ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.