Select Your Language

Notifications

webdunia
webdunia
webdunia
webdunia

ಯಶ್ ಕೆಜಿಎಫ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಯಶ್  ಕೆಜಿಎಫ್’ ಸಿನಿಮಾ ಬಿಡುಗಡೆಗೆ  ಮುಹೂರ್ತ ಫಿಕ್ಸ್
ಬೆಂಗಳೂರು , ಬುಧವಾರ, 12 ಸೆಪ್ಟಂಬರ್ 2018 (07:14 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್’ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ.


ಅದೇನೆಂದರೆ ರಾಕಿಂಗ್‌ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಬಿಡುಗಡೆಗೆ  ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 19ರ ಸಂಜೆ 6 ಗಂಟೆಗೆ 'ಕೆಜಿಎಫ್' ಬಿಡುಗಡೆ ಆಗಲಿರುವ ದಿನಾಂಕ​ ಪ್ರಕಟವಾಗಲಿದೆ. ಅಂದೇ ಈ ಚಿತ್ರದ ಟ್ರೈಲರ್ ಯಾವಾಗ ಶೀರ್ಷಿಕೆ ಆಗಲಿದೆ ಎಂಬುದು ರಿವೀಲ್ ಆಗಲಿದೆ.


'ಕೆಜಿಎಫ್' ಚಿತ್ರದಲ್ಲಿ ಯಶ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ನಟಿ ತಮನ್ನಾ ಭಾಟಿಯಾ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್  'ಕೆಜಿಎಫ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡ ಕಿರುತೆರೆ ನಟಿ